SSLC ಅಥವಾ ITI ಪಾಸ್ ಆದ ಯುವಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಉದ್ಯೋಗ ಅವಕಾಶ ಲಭ್ಯವಾಗಿದೆ. Central Reserve Police Force (CRPF) ವತಿಯಿಂದ 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಕಾನ್ಸ್ಟೆಬಲ್ (ಟೆಕ್ನಿಕಲ್ & ಟ್ರೇಡ್ಸ್ಮನ್) ವಿಭಾಗದಲ್ಲಿ ಒಟ್ಟು 9,195 ಹುದ್ದೆಗಳು ಭರ್ತಿಯಾಗಲಿವೆ. ಈ ಪೈಕಿ 9,096 ಹುದ್ದೆಗಳು ಪುರುಷರಿಗೆ ಹಾಗೂ 79 ಹುದ್ದೆಗಳು ಮಹಿಳೆಯರಿಗೆ ಮೀಸಲಾಗಿವೆ.
ಲಭ್ಯವಿರುವ ಹುದ್ದೆಗಳು
ಟ್ರೇಡ್ಸ್ಮನ್ ವಿಭಾಗದಲ್ಲಿ ವಿವಿಧ ಹುದ್ದೆಗಳು
- ಡ್ರೈವರ್
- ಕುಕ್
- ಗಾರ್ಡನರ್
- ವಾಶರ್ಮನ್
- ಕ್ಲೀನರ್
- ಫಿಟ್ಟರ್
- ಟೈಲರ್
- ಪೇಂಟರ್
- ಕಾರ್ಪೆಂಟರ್
- ಹೇರ್ ಡ್ರೆಸ್ಸರ್
- ಸಫಾಯಿ ಕರ್ಮಚಾರಿ
- ಬ್ರಾಸ್ ಬ್ಯಾಂಡ್
ಪಯೋನಿಯರ್ ವಿಭಾಗ:
- ಎಲೆಕ್ಟ್ರಿಷಿಯನ್
- ಮೋಟಾರ್ ಮೆಕಾನಿಕ್
- ಪ್ಲಂಬರ್
ಅರ್ಹತೆ ಮತ್ತು ವಯೋಮಿತಿ
- ಕನಿಷ್ಠ: SSLC / 10ನೇ ತರಗತಿ ಪಾಸ್ + ITI ಅಥವಾ ಟ್ರೇಡ್ ಪ್ರಮಾಣಪತ್ರ
- ವಯಸ್ಸು:
- ಸಾಮಾನ್ಯ ಹುದ್ದೆಗಳು: 18 – 23 ವರ್ಷ
- ಡ್ರೈವರ್: 21 – 27 ವರ್ಷ
- ವಯೋ ಸಡಿಲಿಕೆ:
- SC/ST: 5 ವರ್ಷ
- OBC: 3 ವರ್ಷ
ಅರ್ಜಿ ಶುಲ್ಕ
- General / OBC / EWS: ₹100
- SC/ST ಮತ್ತು ಮಹಿಳೆಯರು: ಶುಲ್ಕವಿಲ್ಲ
ಪ್ರಮುಖ ದಿನಾಂಕಗಳು
ಏಪ್ರಿಲ್ 20, 2026 ರಿಂದ ಅರ್ಜಿ ಸಲ್ಲಿಸಲು ಆರಂಭವಾಗಿದ್ದು, ಮೇ 19, 2026 ಕೊನೆಯ ದಿನವಾಗಿದೆ. ಅಧಿಕೃತ CRPF Recruitment Portal ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ (5 ಹಂತಗಳು)
- PET/PST – ದೈಹಿಕ ಪರೀಕ್ಷೆ
- CBT – 100 ಪ್ರಶ್ನೆಗಳು / 100 ಅಂಕ
- 4 ತಪ್ಪು ಉತ್ತರಗಳಿಗೆ 1 ಅಂಕ ನೆಗೆಟಿವ್
- ಟ್ರೇಡ್/ಸ್ಕಿಲ್ ಟೆಸ್ಟ್
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ವೇತನ ಶ್ರೇಣಿ
Pay Level-3: ₹21,700 – ₹69,100 ಇದ್ದು, ಅದರೊಂದಿಗೆ, ಭತ್ಯೆಗಳು, ಪಿಎಫ್, ಗ್ರಾಚ್ಯುಟಿ ಮುಂತಾದ ಸೌಲಭ್ಯಗಳಿವೆ. ಹೆಚ್ಚಿನ ಮಾಹಿತಿಗೆ: 011-26160255 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

















