ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಸೌಲಭ್ಯ ಘೋಷಿಸಲಾಗಿದೆ. ಉಚಿತ ಬಸ್ ಪ್ರಯಾಣದ ಜೊತೆಗೆ ಇದೀಗ ಮಹಿಳೆಯರಿಗೆ ವಿಶೇಷ ಸ್ಮಾರ್ಟ್ ಕಾರ್ಡ್ ನೀಡಲು ಸರ್ಕಾರ ನಿರ್ಧರಿಸಿದೆ. ಜೂನ್ ತಿಂಗಳಿನಿಂದ ಈ ಸ್ಮಾರ್ಟ್ ಕಾರ್ಡ್ ವಿತರಣೆ ಪ್ರಾರಂಭವಾಗಲಿದ್ದು, ಮಹಿಳೆಯರಿಗೆ ಬಸ್ ಮತ್ತು ಮೆಟ್ರೋ ಪ್ರಯಾಣವನ್ನು ಇನ್ನಷ್ಟು ಸುಲಭ ಹಾಗೂ ಡಿಜಿಟಲ್ ರೀತಿಯಲ್ಲಿ ಮಾಡಲು ಸಹಾಯವಾಗಲಿದೆ.
ಸ್ಮಾರ್ಟ್ ಕಾರ್ಡ್ ಪ್ರಯೋಜನಗಳೇನು?
- ಆಧಾರ್ ಕಾರ್ಡ್ ನ ಬದಲಿಗೆ ಸ್ಮಾರ್ಟ್ ಕಾರ್ಡ್ ತೋರಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು
- ಇದೇ ಕಾರ್ಡ್ ಮೂಲಕ ಮೆಟ್ರೋ ಪ್ರಯಾಣವನ್ನೂ ಮಾಡಬಹುದಾಗಿದ್ದು, ಮೆಟ್ರೋ ಗೆ ಮೊದಲೇ ರಿಚಾರ್ಜ್ ಮಾಡಬೇಕಾಗುತ್ತದೆ.
- ನಗದು ರಹಿತ (Cashless) ಪ್ರಯಾಣ ವ್ಯವಸ್ಥೆ
ಸ್ಮಾರ್ಟ್ ಕಾರ್ಡ್ ವಿತರಣೆ ಮೊದಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವ್ಯಾಪ್ತಿಯಲ್ಲಿ ಪ್ರಾರಂಭವಾಗಲಿದೆ. ಬಳಿಕ ಹಂತ ಹಂತವಾಗಿ ರಾಜ್ಯದ ಇತರೆ ಸಾರಿಗೆ ನಿಗಮಗಳಿಗೂ ವಿಸ್ತರಣೆ ಮಾಡಲಾಗುತ್ತದೆ.
ಕಾರ್ಡ್ ಪಡೆಯುವುದು ಹೇಗೆ?
- ಆಧಾರ ಕಾರ್ಡ್ ನೀಡಿದರೆ ಸಾಕು
- ಸಂಪೂರ್ಣ ಉಚಿತ ವಿತರಣೆ
- ಅರ್ಹ ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಲಭ್ಯ
- ಬಸ್ ನಿಲ್ದಾಣಗಳು, ಬೆಂಗಳೂರು ಒನ್, ಬಾಪುಜಿ ಸೇವಾ ಕೇಂದ್ರಗಳಲ್ಲಿ ಸಿಗಲಿದೆ
- ಆನ್ಲೈನ್ ಅರ್ಜಿ ಸಲ್ಲಿಸುವ ಅವಕಾಶವೂ ಇದೆ
ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಕಾರ್ಡಿನ ಮೇಲೆ ಹೆಸರು, ಫೋಟೋ, ಆಧಾರ್ ಕಾರ್ಡಿನ ವಿವರಗಳು ಕಾರ್ಡ್ನಲ್ಲಿ ಮುದ್ರಿಸಲ್ಪಟ್ಟಿರುತ್ತದೆ. ಕಾರ್ಡ್ ವರ್ಗಾವಣೆ (transfer) ಮಾಡಲು ಅವಕಾಶ ಇರುವುದಿಲ್ಲ.
ರಾಜ್ಯ ಸರ್ಕಾರ ಸುಮಾರು 3 ಕೋಟಿ ಸ್ಮಾರ್ಟ್ ಕಾರ್ಡ್ಗಳನ್ನು ಮುದ್ರಿಸುವ ಯೋಜನೆ ರೂಪಿಸಿದ್ದು, ಮೂರು ತಿಂಗಳೊಳಗೆ ಎಲ್ಲಾ ಅರ್ಹ ಮಹಿಳೆಯರಿಗೆ ವಿತರಿಸುವ ಗುರಿ ಇಡಲಾಗಿದೆ. ಶಕ್ತಿ ಯೋಜನೆ ಈಗ ಮತ್ತಷ್ಟು ತಂತ್ರಜ್ಞಾನಾಧಾರಿತವಾಗಿ ರೂಪುಗೊಳ್ಳುತ್ತಿದ್ದು, ಮಹಿಳೆಯರ ಪ್ರಯಾಣ ಸುಲಭ, ವೇಗವಾದ ಮತ್ತು ಪಾರದರ್ಶಕವಾಗಲಿದೆ.

















