ಮೇ 3ರಂದು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಸಮ್ಮೇಳನ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಹದಿನಾರನೇ ಕನ್ನಡ ಸಾಹಿತ್ಯ ಸಮ್ಮೇಳನ ‘ಬೀಷ್ಮೋತ್ಸವ’ ಸಾಹಿತ್ಯ -ಸಂಸ್ಕೃತಿ -ಕಲೋತ್ಸವವು ಇದೇ ಮೇ 3ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐ ವೈ ಸಿ ಸಭಾಂಗಣದಲ್ಲಿ ಕೆಮ್ತೂರು ದೊಡ್ಡಣ್ಣ ಶೆಟ್ಟಿ ವೇದಿಕೆಯಲ್ಲಿ ನಡೆಯಲಿದೆ ಎಂದು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್‌ಪಿ ಹೇಳಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಡಾ. ಭಾಸ್ಕರಾನಂದ ಕುಮಾರ್ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನವು ಬೆಳಿಗ್ಗೆ 8.30ಕ್ಕೆ ಮೆರವಣಿಗೆಯೊಂದಿಗೆ […]

ಕಾರ್ಕಳ: ಸಿಐಟಿಯು ನೇತ್ರತ್ವದಲ್ಲಿ ಕಾರ್ಮಿಕರ ದಿನಾಚರಣೆ

ಕಾರ್ಕಳ: ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಪ್ರಯುಕ್ತ ಕಾರ್ಕಳದಲ್ಲಿ ಸಿಐಟಿಯು ನೇತ್ರತ್ವದಲ್ಲಿ ಮೇ ದಿನಾಚರಣೆ ಆಚರಣೆ ಬಂಡಿಮಠ ಬಸ್ ನಿಲ್ದಾಣ ಬಳಿ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ರಾದ ಶಶಿಧರ್ ಗೊಲ್ಲ ಮಾತನಾಡಿದರು. ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಸುನೀತಾ ಶೆಟ್ಟಿ, ಲೆಮಿನಾ ಫೌಂಡ್ರಿಸ್ ಯೂನಿಯನ್ ಅಧ್ಯಕ್ಷ ರಾದ ಮೋಹನ್ ಚಂದ್ರ,ಕಟ್ಟಡ ಸಂಘದ ಮುಖಂಡರಾದ ನಾಗೇಶ್ ಮತ್ತು ಪುಷ್ಪ, ಅಕ್ಷರದಾಸೋಹ ಸಂಘಟನೆಯ ಜಯಶ್ರೀ ಉಪಸ್ಥಿತರಿದ್ದರು

ದಿನವಿಡೀ ಇಯರ್ ಫೋನ್ ಬಳಸುವ ಅಭ್ಯಾಸ ನಿಮಗಿದ್ಯಾ? ಅದೆಷ್ಟು ಡೇಂಜರಸ್ ಗೊತ್ತಾ?

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಇಯರ್‌ಫೋನ್ ನಮ್ಮ ಜೀವನದ ಭಾಗವಾಗಿಬಿಟ್ಟಿವೆ. ಆಫೀಸ್ ಮೀಟಿಂಗ್‌ಗಳಿಂದ ಹಿಡಿದು ಸಂಗೀತ, ಫೋನ್ ಕಾಲ್‌ಗಳವರೆಗೆ ಎಲ್ಲಕ್ಕೂ ನಾವು ಇಯರ್‌ಫೋನ್‌ಗಳನ್ನೇ ಹೆಚ್ಚು ಬಳಸುತ್ತೇವೆ. ಆದರೆ, ಗಂಟೆಗಟ್ಟಲೆ ಇವುಗಳನ್ನು ಬಳಸುವುದು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಶ್ರವಣ ಶಕ್ತಿ ಕುಂಠಿತವಾಗುವ ಅಪಾಯ ಇಯರ್‌ಫೋನ್‌ನಲ್ಲಿ ಜೋರಾಗಿ ಸಂಗೀತ ಕೇಳುವುದು ಕಿವಿಯ ಒಳಗಿನ ಸೂಕ್ಷ್ಮ ನರಗಳಿಗೆ ನೇರವಾಗಿ ಹಾನಿ ಉಂಟುಮಾಡುತ್ತದೆ. ದೀರ್ಘಕಾಲ ಹೆಚ್ಚು ಶಬ್ದಕ್ಕೆ ಒಡ್ಡಿಕೊಳ್ಳುವುದರಿಂದ ಕಿವಿ ಮಂದವಾಗುವುದು […]

ಗ್ಯಾಸ್ ದರ ಏರಿಕೆ ಹೊಟೇಲು ಉದ್ಯಮಕ್ಕೆ ಆಘಾತ ತಂದಿದೆ- ಡಾ. ತಲ್ಲೂರು ಶಿವರಾಮ ಶೆಟ್ಟಿ

ಉಡುಪಿ: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಏಕಾಏಕಿಯಾಗಿ ಇಂದು ಬರೋಬ್ಬರಿ 993ರೂ. ಹೆಚ್ಚಳವಾಗಿದೆ. ಇದರಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಿಗಳಿಗೆ ದೊಡ್ಡ ಆರ್ಥಿಕ ಹೊರೆಯಾಗಲಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳದಿಂದ ಹೊರಗಿನ ಆಹಾರ ಪದಾರ್ಥಗಳ ಬೆಲೆ ಏರಿಕೆಯ ಭೀತಿ ಎದುರಾಗಿದೆ. ಎಲ್ ಪಿಜಿ ದರ ಏರಿಕೆ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಹೊಟೇಲ್ ಮಾಲಕರ ಸಂಘದ ರಾಜ್ಯ ಉಪಾಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು, ಗ್ಯಾಸ್ ಸಿಲಿಂಡರ್ ಕೊರತೆ ಹಾಗೂ ದರ […]

ಬೈಂದೂರು: ಐ.ಟಿ.ಐ ಪ್ರವೇಶಾತಿಗೆ ಅರ್ಜಿ ಆಹ್ವಾನ

ಉಡುಪಿ: ಬೈಂದೂರು ಇಲ್ಲಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಲೆಕ್ಟ್ರಿಷಿಯನ್, ಫಿಟ್ಟರ್ ಮತ್ತು ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ ವೃತ್ತಿಗಳ ಪ್ರವೇಶಾತಿಗೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 8 ಕೊನೆಯ ದಿನ. ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.cite.karnataka.gov.in ಅಥವಾ ಪ್ರಾಚಾರ್ಯರು, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಬೈಂದೂರು ಮೊಬೈಲ್ ನಂ: 9980305173, 9741847649 ಹಾಗೂ 9483593148 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರ ಕಚೇರಿ ಪ್ರಕಟಣೆ ತಿಳಿಸಿದೆ.