ಎಲ್​ಪಿಜಿ ಸಿಲಿಂಡರ್ ಬೆಲೆ 993 ರೂ. ಏರಿಕೆ! ಇಂದಿನಿಂದಲೇ ಜಾರಿ

ನವದೆಹಲಿ: ಇರಾನ್, ಇಸ್ರೇಲ್, ಅಮೇರಿಕಾ ದೇಶಗಳ ಯುದ್ಧ ಪರಿಸ್ಥಿತಿ ಹಾಗೂ ಹೊರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಎಲ್.ಪಿ.ಜಿ. ಕೊರತೆ ಉಂಟಾಗಿದೆ. ಇದೀಗ ದೇಶಾದ್ಯಂತ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಜಾರಿಯಾಗಿದೆ. ಇಂದಿನಿಂದಲೇ (ಮೇ 1) ಅನ್ವಯವಾಗುವಂತೆ, ಪ್ರತಿ ಸಿಲಿಂಡರ್‌ಗೆ ₹993 ಹೆಚ್ಚಳ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಏರಿಕೆಯ ನಂತರ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರ ₹3,071.50ಕ್ಕೆ ತಲುಪಿದೆ. ಈ ಬೆಲೆ ಏರಿಕೆ ಹೋಟೆಲ್‌, ರೆಸ್ಟೋರೆಂಟ್ ಹಾಗೂ ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಸಾರ್ವಜನಿಕರಿಗೆ ಸ್ವಲ್ಪ ರಿಲೀಫ್

ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾದರೂ, ಸಾಮಾನ್ಯ ಜನರಿಗೆ ಬಳಸುವ ಇಂಧನ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಸುಮಾರು 33 ಕೋಟಿ ಗ್ರಾಹಕರು ಬಳಸುವ ದೇಶೀಯ ಸಿಲಿಂಡರ್ ದರ ಸ್ಥಿರವಾಗಿರುವುದು ಜನರಿಗೆ ಸ್ವಲ್ಪ ಸಮಾಧಾನ ತಂದಿದೆ. ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಇದುವರೆಗೆ ₹1,950–₹2,200 ನಡುವೆಯಿತ್ತು. ಇತ್ತೀಚಿನ ಏರಿಕೆಯ ಪರಿಣಾಮವಾಗಿ ಇಲ್ಲಿ ಕೂಡ ದರಗಳು ಹೆಚ್ಚುವ ಸಾಧ್ಯತೆ ಇದೆ.

ಪರಿಣಾಮ ಏನು?

  • ಹೋಟೆಲ್ ಮತ್ತು ಆಹಾರ ಉದ್ಯಮದಲ್ಲಿ ಖರ್ಚು ಹೆಚ್ಚಳ
  • ಆಹಾರದ ದರ ಏರಿಕೆ ಸಾಧ್ಯತೆ
  • ಸಣ್ಣ ವ್ಯಾಪಾರಿಗಳಿಗೆ ಹೆಚ್ಚುವರಿ ಒತ್ತಡ

ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ ಈ ಭಾರೀ ಏರಿಕೆ ಉದ್ಯಮ ಕ್ಷೇತ್ರಕ್ಕೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ. ಆದರೆ ಸಾಮಾನ್ಯ ಜನರಿಗೆ ಬಳಸುವ ಇಂಧನ ದರಗಳು ಸ್ಥಿರವಾಗಿರುವುದು ತಾತ್ಕಾಲಿಕ ನಿಟ್ಟುಸಿರು ನೀಡಿದೆ.