ಮರು ಮೌಲ್ಯಮಾಪನ: ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ ರಾಜ್ಯ ಮಟ್ಟದಲ್ಲಿ 3ನೇ ರ‍್ಯಾಂಕ್, ಉಡುಪಿ ಜಿಲ್ಲೆಗೆ ಪ್ರಥಮ.

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನದ ನಂತರ ರಾಜ್ಯ ಮಟ್ಟದ ಟಾಪ್ 10 ಸ್ಥಾನ ದಲ್ಲಿ 42 ರ‍್ಯಾಂಕ್’ಗಳನ್ನು ಪಡದುಕೊಂಡಿದೆ.

ವಾಣಿಜ್ಯ ವಿಭಾಗದಲ್ಲಿ ಧನ್ಯಾ ಭಟ್ (598) ರಾಜ್ಯಕ್ಕೆ 3ನೇ ರ‍್ಯಾಂಕ್ ಪಡೆದು, ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಅದ್ಭುತ ಸಾಧನೆ ಮೆರೆದಿದ್ದಾಳೆ.

ಕೀರ್ತನಾ (595) 6 ನೇ ರ‍್ಯಾಂಕ್, ಸಿಂಚನಾ ( 593) 8ನೇ ರ‍್ಯಾಂಕ್, ಕೃತಿ ಜೆ. ಪುತ್ರನ್ ಮತ್ತು ರಮ್ಯಾ.ಎನ್ (591) 10ನೇ ರ‍್ಯಾಂಕ್ ಪಡೆದುಕೊಳ್ಳುವುದರ ಮೂಲಕ ಸಾಧನೆ ಮೆರೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿ ತರುಣ್ ಪ್ರಭು ಮತ್ತು ಕಿಶನ್ ಕುಮಾರ್ ಶೆಟ್ಟಿ (593) 7ನೇ ರ‍್ಯಾಂಕ್, ಫಾತಿಮಾ ತೈಬಾ ಮತ್ತು ಕಾರ್ತಿಕ್ ಮೈಯ್ಯ (590) 10ನೇ ರ‍್ಯಾಂಕ್ ಪಡೆದಿರುತ್ತಾರೆ.

ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.