ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್‌ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳಾದ ಚೇತನ್ ವಿ ಕೋಟ್ಯಾನ್ ಮತ್ತು ಆಶ್ಲೇ ಫೆರ್ನಾಂಡಿಸ್ ಇವರು ದಿನಾಂಕ ೨೫ ಮತ್ತು ೨೬ ರಂದು ಗೂಗಲ್ ಡೆವೆಲಪರ್ ಗ್ರೂಪ್ಸ್ ಬೆಂಗಳೂರು ಮತ್ತು ರೋಟರಿ ಇಂಟರ್ ನ್ಯಾಷನಲ್‌ನ ಸಹಯೋಗದೊಂದಿಗೆ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್‌ನಲ್ಲಿ “ಶ್ರೇಷ್ಠತಾ ಪ್ರಶಸ್ತಿ”ಯನ್ನು ಪಡೆದಿರುತ್ತಾರೆ.ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ “VoiceGuru” ಯೋಜನೆಯು ಸ್ಟೇಟ್ ಬೋರ್ಡ್ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಿದ ಹೈಪರ್ ಪರ್ಸನಲೈಸ್ಡ್, ಧ್ವನಿ ಆಧಾರಿತ ಎ ಐ ಟ್ಯೂಟರಿಂಗ್ ವೇದಿಕೆಯಾಗಿದೆ.
ಕರ್ನಾಟಕ ರಾಜ್ಯ ಮಂಡಳಿ ಪಠ್ಯಕ್ರಮವನ್ನು ಅನುಸರಿಸುವ ವಿದ್ಯಾರ್ಥಿಗಳನ್ನು ಒಳಗೊಂಡಂತೆ, ಈ ವೇದಿಕೆಯು ಧ್ವನಿ ಆಧಾರಿತ ಎ ಐ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಅಗತ್ಯಗಳಿಗೆ ತಕ್ಕಂತೆ ಶೈಕ್ಷಣಿಕ ಬೆಂಬಲವನ್ನು ಹೆಚ್ಚಿಸಿ ಕಲಿಕೆಯನ್ನು ಹೆಚ್ಚು ಸುಲಭ ಮಾಡುವ ಉದ್ದೇಶವನ್ನು ಹೊಂದಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಪ್ರಾಂಶುಪಾಲರು ಹೃತ್ಪೂರ್ವಕ ಅಭಿನಂದನೆಗಳನ್ನು ವ್ಯಕ್ತಪಡಿಸಿರುತ್ತಾರೆ.

















