“ಹರಿ ಸಾಲಿಯಾನ್” ಅವರಿಗೆ ಹೆಜಮಾಡಿ ಯ ಗುಂಡಿ ಮನೆ ನಾಗ ಬನದಲ್ಲಿ ಸನ್ಮಾನ;

ಹೆಜಮಾಡಿ ಯ ಪ್ರತಿಷ್ಠಿತ ಗುಂಡಿ ಮನೆ ಯ ಹರಿ ಶಾಸ್ತ್ರೀ (ಹರಿ ಸಾಲಿಯಾನ್ ) ಮುಂಬಯಿ ಮಹಾನಗರ ಪಾಲಿಕೆ ಯ ಚುನಾವಣೆ ಯಲ್ಲಿ ಶಿವಸೇನೆ (ಯು. ಬಿ. ಟಿ ) ಯಿಂದ ಭಾಂದ್ರ ವಾರ್ಡ್ 95 ರಲ್ಲಿ ಅತ್ಯಧಿಕಾ ಮತ ದಿಂದ ಆಯ್ಕೆ ಯಾಗಿದ್ದು, ಇತೀಚೆಗೆ ಹೆಜಮಾಡಿ ಯ ಗುಂಡಿ ಮನೆ ನಾಗ ಬನದಲ್ಲಿ ಸನ್ಮಾನ ಮಾಡಲಾಯಿತು.ನಾಗ ಬನದ ಪ್ರಧಾನ ಅರ್ಚಕ ವೆ. ಮೂ ಹರಿದಾಸ್ ಭಟ್ ಸನ್ಮಾನಿಸಿ ಶುಭ ಹಾರೈಸಿದರು. ಗುಂಡಿ ಮನೆ ಯ ದಾಮೋದರ ಬಂಗೇರ, ಜಿನರಾಜ್ ಬಂಗೇರ, ಹರಿ ಸಾಲಿಯಾನ್ ನ ತಾಯಿ ದೇಜಮ್ಮ ಜಗನಾಥ್,ಸದಾನಂದ ಬಂಗೇರ,ರೋಹಿತ್ ಬಂಗೇರ, ವಿನೋದ್ ಬಂಗೇರ, ಸುನಿಲ್ ಬಂಗೇರ, ಭಾಸ್ಕರ್ ಬಂಗೇರ, ಶೀನ ಪೂಜಾರಿ ಪಡುಬಿದ್ರಿ,ಹೇಮಾನಂದ್ ಪುತ್ರನ್ ಮೊದಲಾದರು ಉಪಸ್ಥಿತರಿದ್ದರು.