ಮಣಿಪಾಲ‌ MSDC ಯಿಂದ ತಂತ್ರಜ್ಞಾನಾಧಾರಿತ ಕಲಿಕೆಯ ಬೇಸಿಗೆ ಶಿಬಿರ, ವಿದ್ಯಾರ್ಥಿಗಳನ್ನು ಭವಿಷ್ಯಕ್ಕಾಗಿ ಸಿದ್ಧಗೊಳಿಸುವ ವಿಶೇಷ ಕ್ಯಾಂಪ್!

ಮಣಿಪಾಲ: ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ಸೃಜನಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ STEM IoT ಸಮರ್ ಕ್ಯಾಂಪ್ ಆಯೋಜಿಸಲಾಗಿದೆ. ಮೇ 11ರಿಂದ 21ರವರೆಗೆ ನಡೆಯಲಿರುವ ಈ ಶಿಬಿರವು ಶಾಲಾ ವಿದ್ಯಾರ್ಥಿಗಳಿಗೆ ತಂತ್ರಜ್ಞಾನಾಧಾರಿತ ತರಬೇತಿ ನೀಡಲಿದೆ.

ಶಿಬಿರದಲ್ಲಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಜೂನಿಯರ್ ಬ್ಯಾಚ್ ಹಾಗೂ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸೀನಿಯರ್ ಬ್ಯಾಚ್ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ತರಗತಿಗಳು ನಡೆಯಲಿವೆ.

ವಿದ್ಯಾರ್ಥಿಗಳಿಗೆ ಎಲ್‌ಇಡಿ ಸರ್ಕ್ಯೂಟ್‌ಗಳು, ಸ್ಮಾರ್ಟ್ ಸ್ಟ್ರೀಟ್ ಲೈಟ್ಸ್, ವಾಟರ್ ಮಾನಿಟರಿಂಗ್, ಆಟೊಮೇಷನ್, IoT ಮತ್ತು ಆಪ್/ಗೇಮ್ ಡಿಸೈನ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ವಿಷಯಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ಈ ಶಿಬಿರದ ಮೂಲಕ ವಿದ್ಯಾರ್ಥಿಗಳಲ್ಲಿ ಕೋಡಿಂಗ್, ನವೀನ ಚಿಂತನೆ, ಸಮಸ್ಯೆ ಪರಿಹಾರ ಕೌಶಲ್ಯ ಹಾಗೂ ಸೃಜನಾತ್ಮಕ ಚಟುವಟಿಕೆಗಳನ್ನು ಬೆಳೆಸುವ ಗುರಿಯಿದೆ.

ಶಿಬಿರದ ಕಾರ್ಯಕ್ರಮ ಶುಲ್ಕ ₹4,000 ನಿಗದಿಪಡಿಸಲಾಗಿದ್ದು, ಇದರಲ್ಲಿ ಅಗತ್ಯ ಸಾಮಗ್ರಿಗಳ ವೆಚ್ಚವೂ ಸೇರಿದೆ. ಹೆಚ್ಚಿನ ಮಾಹಿತಿಗಾಗಿ 8123165069 ಸಂಖ್ಯೆಗೆ ಸಂಪರ್ಕಿಸಿ.