ಉಡುಪಿ: ಶ್ರೀರಥಬೀದಿ- ರಾಜಾಂಗಣ ರಾಜಮಾರ್ಗದಲ್ಲಿ ನೂತನವಾಗಿ ನವೀಕರಿಸಲಾದ ಶ್ರೀ ಕೃಷ್ಣ ದರ್ಶನಕ್ಕಾಗಿ ಸರತಿ ಸಾಲು ವ್ಯವಸ್ಥೆ ಮತ್ತು ಮೇಲ್ಛಾವಣಿ ವ್ಯವಸ್ಥೆ ಹಾಗೂ ವಿಐಪಿ ದರ್ಶನಕ್ಕಾಗಿ ಹಾಗೂ ಸ್ಥಳೀಯ ಭಕ್ತರಿಗಾಗಿ ಐಡಿ ಆಧಾರಿತ ಎಂಟ್ರೆನ್ಸ್ ವ್ಯವಸ್ಥೆಗೆ ಇಂದು ಚಾಲನೆ ನೀಡಲಾಯಿತು.
ಪರ್ಯಾಯ ಶ್ರೀ ಶೀರೂರು ಮಠ ಪೀಠಾಧೀಶರಾದ ಶ್ರೀ ವೇದವರ್ಧನತೀರ್ಥ ಸ್ವಾಮೀಜಿ ನೂತನ ವ್ಯವಸ್ಥೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು,ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಶೀರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೆಕಾರು ಹಾಗೂ ಉಭಯ ಮಠಗಳ ಶಿಷ್ಯ ವರ್ಗದವರು ಇದ್ದರು.


















