ಉಡುಪಿ: ಕರ್ನಾಟಕ ರಾಜ್ಯದ ಗ್ರಾಮ ಪಂಚಾಯತ್‌ಗಳ ಚುನಾಯಿತ ಸದಸ್ಯ ಸ್ಥಾನಗಳನ್ನು ಪ್ರಕರಣ 5(1) ರಂತೆ ನಿಗದಿಪಡಿಸಿದ ಕರಡು ಪ್ರಕಟಣೆಗೆ ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ಮೇ 2 ರ ಸಂಜೆ 5.30ರವರೆಗೆ ವಿಸ್ತರಿಸಲಾಗಿದೆ.
ರಾಜ್ಯದ 31 ಜಿಲ್ಲೆಗಳ ಗ್ರಾಮ ಪಂಚಾಯತಿಗಳ ಚುನಾಯಿತ ಸದಸ್ಯರ ಸಂಖ್ಯೆಯ ಕುರಿತಂತೆ ಸ್ವೀಕರಿಸಿದ ಆಕ್ಷೇಪಣೆ/ಅಹವಾಲುಗಳ ಬಗ್ಗೆ ಎಪ್ರಿಲ್ 27 ರಂದು ನಿಗದಿಪಡಿಸಿದ್ದ ಪರಿಶೀಲನಾ ಅದಾಲತ್‌ನ ದಿನಾಂಕವನ್ನು ಮುಂದೂಡಿದ್ದು ಹೊಸ ವೇಳಾಪಟ್ಟಿಯಂತೆ ಮೇ 5 ರಂದು ಮಂಗಳವಾರ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗೇಟ್ ನಂ-2, 2 ನೇ ಮಹಡಿ ಇಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 5 ಗಂಟೆವರೆಗೆ ಅದಾಲತ್ ನಡೆಯಲಿದ್ದು ಆಕ್ಷೇಪಣೆ ಸಲ್ಲಿಸಿದವರು ತಮ್ಮ ಆಧಾರ್ ಅಥವಾ ಗುರುತಿನ ಚೀಟಿ ಅಥವಾ ಸರ್ಕಾರದಿಂದ ನೀಡಲಾಗಿರುವ ಭಾವಚಿತ್ರವುಳ್ಳ ಯಾವುದೇ ಗುರುತಿನ ಚೀಟಿ ಸಲ್ಲಿಸಿ ಭಾಗವಹಿಸಬಹುದು ಎಂದು ಕರ್ನಾಟಕ ಪಂಚಾಯತ್ ಸೀಮಾ ನಿರ್ಣಯ ಆಯೋಗದ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ..

















