ತಿರಸ್ಕೃತ ಬೆಳೆ ವಿಮೆ: ಆಕ್ಷೇಪಣೆ ಆಹ್ವಾನ

ಉಡುಪಿ: ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ 2024-25 ಮುಂಗಾರು ಹಂಗಾಮಿನ ಬೆಳೆ ವಿಮೆಯಡಿ ನೋಂದಣಿಯಾದ ಪ್ರಸ್ತಾವನೆಗಳು ವಿಮಾ ಸಂಸ್ಥೆಯವರು ನೋಂದಾಯಿಸಿದ ಬೆಳೆಗೂ ಹಾಗೂ ಬೆಳೆ ಸಮೀಕ್ಷೆ ವರದಿಗೂ ತಾಳೆಯಾಗದ ಕಾರಣ ತಿರಸ್ಕೃತವಾಗಿದ್ದು ಸದರಿ ಪಟ್ಟಿಯನ್ನು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಉಡುಪಿ, ರೈತ ಸಂಪರ್ಕ ಕೇಂದ್ರ, ಬ್ರಹ್ಮಾವರ ಹಾಗೂ ಸಂಬoಧಪಟ್ಟ ಗ್ರಾಮ ಪಂಚಾಯತ್‌ನ ಸೂಚನಾ ಫಲಕಗಳಲ್ಲಿ ಪ್ರಕಟಿಸಲಾಗಿದ್ದು ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ 15 ದಿನಗಳ ಒಳಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಕಾಪು/ಬ್ರಹ್ಮಾವರ/ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಉಡುಪಿ ಇಲ್ಲಿಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.