ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯ: “ಎ ಐ ಕೋಡಿಂಗ್ ವಿತ್ ನ್ಯಾಚುರಲ್ ಲ್ಯಾಂಗ್‌ವೇಜ್” ಎಂಬ ವಿಷಯದ ಕುರಿತು ಕಾರ್ಯಾಗಾರ

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಗಣಕಯಂತ್ರ ವಿಭಾಗವು ಮಹಿಳಾ ಸಬಲೀಕರಣ ಕೋಶದ ಸಹಯೋಗದೊಂದಿಗೆ “ಎ ಐ ಕೋಡಿಂಗ್ ವಿತ್ ನ್ಯಾಚುರಲ್ ಲ್ಯಾಂಗ್‌ವೇಜ್” ಎಂಬ ವಿಷಯದ ಕುರಿತು ಎಪ್ರಿಲ್ 24 ರಂದು ಕಾರ್ಯಾಗಾರವನ್ನು ಆಯೋಜಿಸಿತ್ತು.

ಈ ಕಾರ್ಯಗಾರವನ್ನು ಸಂಸ್ಥೆಯ ಹಳೆ ವಿದ್ಯಾರ್ಥಿನಿ ಬೆಂಗಳೂರಿನ ರ‍್ಯಾಕಲ್ ಸಂಸ್ಥೆಯ ಸಾಫ್ಟ್ ಸೊಲ್ಯೂಶನ್ ಇಂಜಿನಿಯರ್ ಆಗಿರುವ ವಿಧಿಶಾ ಶೇಟ್ ಹಾಗೂ ಡಾಟಾ ಮತ್ತು ಎ ಐ ವಿಭಾಗದ ಸಾಫ್ಟ್ ಸೊಲ್ಯೂಶನ್ ಇಂಜಿನಿಯರ್ ಆಗಿರುವ ನಿವೇದಿತಾ ಭಟ್ ನಡೆಸಿಕೊಟ್ಟರು.

ಈ ಕಾರ್ಯಾಗಾರದಲ್ಲಿ ವೆಬ್ ಕೋಡಿಂಗ್‌ನ ಹಾಗೂ sಸಂಚಿತ ಗ್ರೇಡ್ ಪಾಯಿಂಟ್ (ಸಿಜಿಪಿಎ) ಲೆಕ್ಕಹಾಕುವ ಪ್ರಾಜೆಕ್ಟ್ಗಳನ್ನು ನಿರ್ಮಿಸುವ ಕೋಡಿಂಗ್‌ಗಳ ಬಗ್ಗೆ ಮತ್ತು ನ್ಯೂರಲ್ ನೆಟ್‌ವರ್ಕ್ ಹಾಗೂ ಟ್ರಾನ್ಸ್ಫಾರ್ಮರ್ ಆರ್ಕಿಟೆಕ್ಚರ್‌ನ ಮೂಲಭೂತ ಅಂಶಗಳು, ಓಪನ್ ಎ ಐ ಮೊದಲಾದುವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.