ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ರಾಷ್ಟೀಯ ಸೇವಾಯೋಜನೆ ಮತ್ತುಸಾಂಸ್ಕೃತಿಕ ಘಟಕವು ಜಂಟಿಯಾಗಿ ಎಪ್ರಿಲ್ 21ರಂದು ಪರಿಸರ ಸಂರಕ್ಷಣೆ ಕುರಿತು ಬೀದಿನಾಟಕವನ್ನು ಉಡುಪಿಯ ರಥಬೀದಿ ಆವರಣದಲ್ಲಿ ಆಯೋಜಿಸಿದ್ದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಅರಣ್ಯನಾಶ ಮತ್ತು ಮಾನವನ ಅಜಾಗರೂಕತೆಯಿಂದಉಂಟಾಗುವ ಪರಿಣಾಮಗಳ ಬಗ್ಗೆ ತಿಳಿಸಿ ಕೊಟ್ಟರು.
ಪರಿಸರ ಸಂರಕ್ಷಣೆ ಮತ್ತು ಸ್ಥಿರ ಜೀವನಶೈಲಿಯ ಬಗ್ಗೆ ಜಾಗೃತಿ ಮೂಡಿಸುವುದು ಈ ಬೀದಿ ನಾಟಕದ ಉದ್ದೇಶವಾಗಿತ್ತು. ವಿದ್ಯಾರ್ಥಿಗಳು ತಮ್ಮ ಮನರಂಜನೀಯ ಭಾವಪೂರ್ಣಅಭಿನಯ ಮತ್ತು ಪ್ರಭಾವಶೀಲ ಸಂದೇಶದ ಮೂಲಕ ಸಾರ್ವಜನಿಕರಿಗೆ ಮನದಟ್ಟಾಗುವಂತೆ ಅರಿವು ಮೂಡಿಸಿ, ದಿನನಿತ್ಯದ ಜೀವನದಲ್ಲಿ ಪರಿಸರ ಸ್ನೇಹಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.

















