ಕಾರ್ಕಳ : ಬೈಲೂರು ಸರಕಾರಿ ಜೂನಿಯರ್ ಕಾಲೇಜಿನ ಲೀಸಾ ಬರ್ಬೋಜಾ ಅವರು 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಪೋಷಕರ ಮಾರ್ಗದರ್ಶನ ಹಾಗೂ ಶಾಲಾ ಶಿಕ್ಷಕರ ಬೋಧನೆಯಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದಿರುವ ಅವರಿಗೆ ಐಎಎಸ್ ಓದಿ, ದೇಶಸೇವೆಗೆ ತೊಡಗುವ ಕನಸಿದೆ.
ಲೀಸಾ ಬರ್ಬೋಜಾ ಇವರು ದೈಹಿಕ ಶಿಕ್ಷಣ ಶಿಕ್ಷಕ ಲ್ಯಾನ್ಸ್ ನಾಯಕ್ ಕಿರಣ್ ಬರ್ಬೋಜಾ ಹಾಗೂ ಶಿಕ್ಷಕಿ ಲವಿನಾ ಮರಿಯಾ ಪಿಂಟೋ ದಂಪತಿಯ ಪುತ್ರಿ.

















