ಕಾರ್ಕಳ: ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಜ್ಞಾನಸುಧಾ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರು 624 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.
ವಿದ್ಯಾರ್ಥಿನಿ ಮಹಾಲಕ್ಷ್ಮಿ ಭಾಗವ್ 624 ಅಂಕಗಳನ್ನು ಗಳಿಸಿದ್ದು, ಇವರು ಕಾರ್ಕಳ ತಾಲೂಕು ಹಿರ್ಗಾನದ ಜಗದೀಶ್ ಭಾಗವ್ ಹಾಗೂ ವನಿತಾ ಭಾಗವ್ ಅವರ ಪುತ್ರಿ. ಭವಿಷ್ಯದಲ್ಲಿ ವೈದ್ಯೆಯಾಗಬೇಕೆಂಬ ಆಸೆಯನ್ನು ಹೊಂದಿದ್ದು, ಯಕ್ಷಗಾನ ರಂಗದಲ್ಲೂ ಹೆಸರು ಮಾಡಿದ್ದಾರೆ.
ಇನ್ನೊಬ್ಬ ವಿದ್ಯಾರ್ಥಿನಿ ಮಹಾಲಕ್ಷ್ಮಿ ಪೈ ಬಿ ಗುಡ್ಡೆಯಂಗಡಿ ನಿವಾಸಿಗಳಾದ ಮಂಜುನಾಥ ಪೈ ಹಾಗೂ ಮೇಘ ಪೈ ಅವರ ಮಗಳು. ಮಹಾಲಕ್ಷ್ಮಿ ಪಿಸಿಎಂಬಿ ವಿಭಾಗ ಆಯ್ಕೆ ಮಾಡಿ ವಿಜ್ಞಾನಿಯಾಗಬೇಕೆಂಬ ಕನಸನ್ನು ಹೊಂದಿದ್ದಾರೆ.
623 ಅಂಕಗಳನ್ನು ಪಡೆದು ಮೂರನೇ ಸ್ಥಾನದಲ್ಲಿರುವ ವೈಷ್ಣವಿ ಶೆಟ್ಟಿಗಾರ್ ಇವರು ವಿಜಯಚಂದ್ರ ಶೆಟ್ಟಿಗಾರ್ ಹಾಗೂ ಆಶಾಲತಾ ಅವರ ಪುತ್ರಿ.
ನಿಟ್ಟೆಯ ಅಂಬರೀಷ್ ಪೂಜಾರಿ ಹಾಗೂ ಶಾರದ ಅವರ ಮಗಳು ಆರೂಷಿ ಪೂಜಾರಿ 622 ಅಂಕಗಳನ್ನು ಗಳಿಸಿದ್ದು, ಪ್ರತಿದಿನ ಎರಡು ಗಂಟೆಗಳ ಓದು ಮತ್ತು ಪುನರಾವರ್ತನೆ ತನ್ನ ಯಶಸ್ಸಿನ ಗುಟ್ಟು ಎಂದು ಹೇಳಿದ್ದಾರೆ.

















