ದಿನಾಂಕ: 25 “ನರಸಿಂಹ ಪ್ರತಿಷ್ಠಾನ‌ ಬೆಳ್ಳಂಪಳ್ಳಿ ಕಲಾರ್ಘ್ಯ ಉತ್ಸವ”

ಉಡುಪಿ: ನರಸಿಂಹ ಪ್ರತಿಷ್ಠಾನ‌,ಬೆಳ್ಳಂಪಳ್ಳಿ ಇದರ ಕಲಾರ್ಘ್ಯ ಉತ್ಸವವು ಇದೇ ಬರುವ 25 ಶನಿವಾರದಂದು ಸಂಜೆ 5 ಗಂಟೆಗೆ ಪ್ರಾರಂಭವಾಗುತ್ತದೆ. ನೃತ್ಯ ಪ್ರಕಾರದ ದೀಪ ಪ್ರಜ್ವಲನದಿಂದ ಆರಂಭಗೊಳ್ಳುವ ಈ ಕಾರ್ಯಕ್ರಮ ,ಕಲಾರ್ಘ್ಯ ಭರತನಾಟ್ಯ ತರಗತಿಯ ಮಕ್ಕಳಿಂದ ಸುಮಾರು ಒಂದು ಗಂಟೆಯ ಕಾರ್ಯಕ್ರಮ ಜರುಗಲಿದೆ. ಇದೇ ಸಂದರ್ಭದಲ್ಲಿ .ನರಸಿಂಹ ಪ್ರತಿಷ್ಠಾನದಿಂದ ಕೊಡ ಮಾಡುವ ಕಲಾರ್ಘ್ಯ ಪ್ರಶಸ್ತಿಯನ್ನು ಭಾರತದ ಸಾಂಸ್ಕೃತಿಕ‌ ರಾಯಭಾರಿ,ಆಳ್ವಾಸ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ. ಎಮ್. ಮೋಹನ್ ಆಳ್ವಾ ರಿಗೆ ‘ಮೋಹನಾಭಿನಂದನ’ ವಿಶೇಷ 16 ಬಗೆಯ ಸಮ್ಮಾನದೊಂದಿಗೆ ವೈಭವದಿಂದ ನೆರವೇರಿಸುವುದೆಂದು ನಿಶ್ಚಯಿಸಲಾಗಿದೆ. ಈ ಕಾರ್ಯಕ್ರಮದ ನಂತರ ಕಲಾರ್ಘ್ಯ ಯಕ್ಷಗಾನ ತರಗತಿಯ ಮಕ್ಕಳಿಂದ ಯಕ್ಷಗಾನ ಹಾಗೂ ಆಳ್ವಾಸ್ ಹಳೆ ವಿದ್ಯಾರ್ಥಿಗಳಿಂದ ದೇವೀ ಮಹಾತ್ಮ್ಯೆ ಎನ್ನುವ ಯಕ್ಷಗಾನ ಬಯಲಾಟ ನಡೆಯಲಿದೆ. ತಾವೆಲ್ಲರೂ ಬಂದು ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕೆಂದು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ.