ಉಡುಪಿ: ಪ್ರಥಮ ಪಿ.ಯು.ಸಿಯಲ್ಲಿ 100ಶೇಕಡಾ ಫಲಿತಾಂಶವನ್ನು ನೀಡಿಕೊಂಡು ದ್ವಿತೀಯ ಪಿ.ಯು.ಸಿಯಲ್ಲಿ ಶೇಕಡಾ 100 ಫಲಿತಾಂಶ ಬಂದಿರುವುದು ಜ್ಞಾನಸುಧಾದ ಹಿರಿಮೆ. ಅಂಕಗಳ ಜೊತೆಗೆ, ನಮಗೆ ಸರ್ವಸ್ವವನ್ನು ನೀಡುವ ಸಮಾಜ, ತಂದೆ ತಾಯಿ, ದೇಶವನ್ನು ಹೇಗೆ ಗೌರವಿಬೇಕು ಎಂಬುದನ್ನು ತಿಳಿದಿರಬೇಕು.
ವಿದ್ಯಾರ್ಥಿಗಳನ್ನು ಈ ದೇಶದ ಆಸ್ತಿಯನ್ನಾಗಿ ಮಾಡುವ ನನ್ನ ಸಂಕಲ್ಪ ಶುದ್ಧವಾಗಿತ್ತು ಆದ್ದರಿಂದ ಅದು ಸಿದ್ಧಿಯಾಗಿದೆ ಎಂದು ಭಾವಿಸುತ್ತೇನೆ. ತಂದೆ ತಾಯಿಯರ ಪರಿಶ್ರಮದ ಬದುಕು ನನ್ನ ಸ್ವಯಂ ನಿಯಂತ್ರಣಕ್ಕೆ ಕಾರಣವಾಯಿತು ಎಂದು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಇವರು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಟ್ರಸ್ಟಿಗಳಾದ ಅನಿಲ್ ಕುಮಾರ್ ಜೈನ್ ಇವರು ಮಾತನಾಡಿ ಸ್ಪರ್ಧಾತ್ಮಕ ಜಗತ್ತಿಗೆ ನಮ್ಮನ್ನು ನಾವು ಅಣಿಗೊಳಿಸಿಕೊಳ್ಳಬೇಕಾದರೆಮಾಡುವ ಕೆಲಸದಲ್ಲಿ ಸಂತೋಷವನ್ನು ಕಾಣಬೇಕು. ಈ ಫಲಿತಾಂಶ ಮುಂದಿನ ಪರೀಕ್ಷೆಗಳಿಗೆ ಇನ್ನಷ್ಟು ಸ್ಫೂರ್ತಿ ನೀಡಲಿ. ಜ್ಞಾನಸುಧಾದಲ್ಲಿ ಅನೇಕ ರೀತಿಯ ವಿದ್ಯಾರ್ಥಿ ವೇತನಗಳಿವೆ, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ತಂದೆ ತಾಯಿಯರ ಆಶೀರ್ವಾದವನ್ನು ಪಡೆದು ಮಾಡಿದ ಕೆಲಸ, ಫಲಪ್ರದವಾಗುವುದು ಎಂದರು.
ಈ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ.ಯ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 98ಕ್ಕಿಂತ ಅಧಿಕ ಪಡೆದ ವಿದ್ಯಾರ್ಥಿಗಳಾದ ಆರ್ನವಿ (597), ಪ್ರಥ್ವಿತಾ ಪಿ ಶೆಟ್ಟಿ (596), ನಿಶ್ಮಿತಾ (594), ಚಿನ್ಮಯಿ ಭಟ್ (593), ಪ್ರೀತಮ್ ಕೆ ಎಂ (592), ಯಶಸ್ವಿನಿ ಬಾರ್ಕೂರು(592), ಮಹಿಮಾ (591), ಶ್ರೀಯಾ ಎಸ್ ಆಚಾರ್ (591), ದೀಪಶ್ರೀ ರಮೇಶ್ ಶೇರ್ವೆಗಾರ್ (590), ಡೆಲಿಷಿಯಾ ಎಂ (590), ಪ್ರಗತಿ ಎಲ್ ಕೋಟ್ಯಾನ್ (590), ಶ್ರೀನಿಧಿ ಎಂ ಮೊಗವೀರ (589), ತನಿಷ್ಕಾ ಕೆ ಶೆಟ್ಟಿ (589), ಮಾಧವ ಕಾಮತ್ (588), ಶ್ಲೋಕ ನವೀನ್ ಶೆಟ್ಟಿ (588), ಟಿ ಕಿಶನ್ ಗಣೇಶ್ (588) ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಜೆಕಾರು ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್, ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿಧಿ ಭಾಗವತ್, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್ ಯು , ಉಪಪ್ರಾಂಶುಪಾಲರಾದ ಪ್ರಕಾಶ್ ಜೋಗಿ, ಎಲ್ಲಾ ವಿಭಾಗಗಳ ವಿಭಾಗ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

















