ಉಡುಪಿ: ನಗರದ ಜೋಡುಕಟ್ಟೆಯಿಂದ ಪ್ರಾರಂಭಗೊoಡ ಈ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆಗೆ ಸಾಂಪ್ರಾದಾಯಿಕ ರೀತಿಯಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರ ನಾಡೋಜ ಡಾ.ಜಿ.ಶಂಕರ್, ಉದ್ಯಮಿ ಪ್ರಸಾದ್ರಾಜ್ ಕಾಂಚನ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಂಚಾಲಕ ರಮೇಶ್ ಕಾಂಚನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಮಾಧವ ಪೂಜಾರಿ, ಪ್ರಧಾನ ತಂತ್ರಿ ಪಿ.ಶಶಿಕಾಂತ ತಂತ್ರಿ, ಪ್ರಧಾನ ಅರ್ಚಕ ಪಿ.ವಾಸುದೇವ ಉಪಾಧ್ಯ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಭುವನೇಂದ್ರ ಕಿದಿಯೂರು, ಪ್ರಮುಖರುಗಳಾದ ಹರಿಯಪ್ಪ ಕೋಟ್ಯಾನ್, ಜಯ ಸಿ.ಕೋಟ್ಯಾನ್, ದಿನೇಶ್ ಪುತ್ರನ್, ಎಂ.ಪ್ರಭಾಕರ ಶೆಟ್ಟಿ, ಶೇಖರ್ ಶೆಟ್ಟಿ, ಯು.ಸುರೇಶ್ ಶೇಟ್, ರಾಜೇಶ್ ಬಿ., ವಿದ್ಯಾಲತಾ ಯು.ಶೆಟ್ಟಿ, ಶಮಿತಾ ಎಸ್.ಭಂಡಾರಿ, ಮೀನಾಕ್ಷಿ ಮಾಧವ ಬನ್ನಂಜೆ, ಬಿಜೆಪಿ ಮುಖಂಡರಾದ ಉದಯ ಕುಮಾರ್ ಶೆಟ್ಟಿ ಕಿದಿಯೂರು, ಮಾಜಿ ಶಾಸಕ ರಘುಪತಿ ಭಟ್, ಸುರೇಶ ನಾಯಕ್, ಮಾಜಿ ನಗರ ಸಭಾ ಸದಸ್ಯ ಟಿ ಜಿ ಹೆಗ್ದೆ, ಹಾಗೂ ಉದಯಕುಮಾರ್ ಶೆಟ್ಟಿ ಬನ್ನಂಜೆ, ತೋಟದ ಮನೆ ದಿವಾಕರ ಶೆಟ್ಟಿ, ಮೊದಲಾದ ಗಣ್ಯರು ಸೇರಿದಂತೆ ವ್ಯವಸ್ಥಾಪನಾ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
2೦೦ಕ್ಕೂ ಅಧಿಕ ವಾಹನಗಳು:
ಹೊರೆ ಕಾಣಿಕೆಯಲ್ಲಿ ಸುಮಾರು 2೦೦ಕ್ಕೂ ಅಧಿಕ ವಾಹನಗಳು ಪಾಲ್ಗೊಂಡವು. ಡೋಲು, ಕೊಂಬು, ಚೆಂಡೆ, ಬಿರುದಾವಳಿ, ಹಸಿರು ಕೊಡೆ, ಕುಣಿತ ಭಜನಾ ತಂಡಗಳು, ಕೀಲು ಕುದುರೆ, ದೇವಳದ ಸ್ತಬ್ಧಚಿತ್ರ, ನಾಸಿಕ್ ಬ್ಯಾಂಡ್, ಹನುಮಂತ, ರoಗೋಲಿ ನೃತ್ಯ ತಂಡ ಹೀಗೆ ನಾಡಿನ ವಿವಿಧ ಸಾಂಸ್ಕೃತಿಕ ತಂಡಗಳು ಭಾಗವಹಿಸಿ ಮೆರವಣಿಗೆಯ ಶೋಭೆ ಹೆಚ್ಚಿಸಿದವು.
ದೇವಳದ ಬ್ರಹ್ಮಕಲಶೋತ್ಸವ ಏ.15ರಿಂದ 20ರ ವರೆಗೆ ನಡೆಯಲಿದೆ. 6 ದಿನಗಳ ಈ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಟಕ, ಶಿವಪ್ರೇರಣ ಸಹಸ್ರ ಕಂಠ ಗಾಯನ, ನೃತ್ಯ ವೈಭವ,ಜಾನಪದ ವೈಭವ, ಕೇರಳ ಚೆಂಡೆ, ಮೆಹೆಂದಿ ರಂಗೋಲಿ ಸ್ಪರ್ಧೆ, ವೀಣಾನಾದೋತ್ಸವ, ಭಕ್ತಿ ರಸಮಂಜರಿ, ಯಕ್ಷಗಾನ ಬಯಲಾಟ, ಚಿತ್ರಕಲಾ ಸ್ಪರ್ಧೆ ಸೇರಿದಂತೆ ಹತ್ತುಹಲವಾರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.
ಪ್ರತೀ ದಿನ ಸಂಜೆ 6.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿವೆ. ಅಂಬಲಪಾಡಿ (ಮೂಡು ಹಾಗೂ ಪಡುಪಾಲು), ಕಪ್ಪೆಟ್ಟು, ಕಿದಿಯೂರು, ಕಡೆಕಾರು, ಕನ್ನರ್ಪಾಡಿ, ನಿಡಂಬೂರು, ಕುತ್ಪಾಡಿ ಈ ಎಂಟು ಮಾಗಣೆಯ ಪ್ರಾಚೀನ ಕೂಡುಕಟ್ಟಿನ ವ್ಯವಸ್ಥೆಯನ್ನು ಸಂಘಟಿಸಿ ಈ ಮಹೋತ್ಸವವನ್ನು ನಡೆಸಲಾಗುತ್ತಿದೆ.

















