ಉಡುಪಿ: ಕರಾವಳಿಯಲ್ಲಿ ಜನಪ್ರಿಯತೆ ಪಡೆದಿರುವ ಮೊಬೈಲ್ ಮಾರಾಟ ಮಳಿಗೆಯಾದ ಬಲ್ಲಾಳ್ ಮೊಬೈಲ್ಸ್ ಇದೀಗ ತನ್ನ ಗ್ರಾಹಕರಿಗೆ ಹೊಸ ಸಂತಸದ ಸುದ್ದಿಯನ್ನು ನೀಡಿದೆ. ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್ಫೋನ್ ಬ್ರ್ಯಾಂಡ್ ಇನ್ಫಿನಿಕ್ಸ್ ಫೋನ್ಗಳು ಇದೀಗ ಇಲ್ಲಿ ಅಧಿಕೃತವಾಗಿ ಲಭ್ಯವಾಗುತ್ತಿವೆ.
ಆಕರ್ಷಕ ಬೆಲೆಗೆ ಅತ್ಯುತ್ತಮ ಫೋನ್ಸ್:ಉಡುಪಿ ಜಿಲ್ಲೆಯ ಗ್ರಾಹಕರಿಗೆ ಹಲವು ವರ್ಷಗಳಿಂದ ವಿಶ್ವಾಸಾರ್ಹ ಸೇವೆಯನ್ನು ನೀಡುತ್ತಿರುವ ಬಲ್ಲಾಳ್ ಮೊಬೈಲ್ಸ್, ಇದೀಗ ಕಡಿಮೆ ಬೆಲೆಯಲ್ಲಿಯೇ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವ ಇನ್ಫಿನಿಕ್ಸ್ ಮೊಬೈಲ್ಗಳನ್ನು ತನ್ನ ಮಳಿಗೆಯಲ್ಲಿ ಪರಿಚಯಿಸಿದೆ.

ಇನ್ಫಿನಿಕ್ಸ್ ಫೋನ್ಗಳು ಉತ್ತಮ ಕ್ಯಾಮೆರಾ ಗುಣಮಟ್ಟ, ವೇಗವಾದ ಪ್ರೊಸೆಸರ್ ಹಾಗೂ ಆಕರ್ಷಕ ವಿನ್ಯಾಸಕ್ಕಾಗಿ ಖ್ಯಾತಿ ಪಡೆದಿವೆ. ವಿಶೇಷವಾಗಿ ಯುವಜನತೆಗೆ ಸೂಕ್ತವಾಗಿರುವ Note ಸರಣಿ ಹಾಗೂ ದೈನಂದಿನ ಬಳಕೆಗೆ ಅನುಕೂಲಕರವಾದ Smart ಸರಣಿ ಈಗ ಉಡುಪಿಯಲ್ಲೇ ಸುಲಭವಾಗಿ ಲಭ್ಯವಾಗುತ್ತಿವೆ.
ಈ ಹಿನ್ನೆಲೆಯಲ್ಲಿ, ಇನ್ಫಿನಿಕ್ಸ್ Note 60 Pro ಖರೀದಿಸುವ ಗ್ರಾಹಕರಿಗೆ ಎರಡು ವರ್ಷದ ವಾರಂಟಿ, ಒಂದು ವರ್ಷದ ಉಚಿತ ಇನ್ಶೂರೆನ್ಸ್ ಹಾಗೂ ರೂ.3999 ಮೌಲ್ಯದ ಬ್ಲೂಟೂತ್ ಸಾಧನವನ್ನು ಉಚಿತವಾಗಿ ನೀಡಲಾಗುತ್ತಿದೆ.
ಆಕರ್ಷಕ ಉಡುಗೊರೆಯೂ ಇದೆ:
ಗ್ರಾಹಕರಿಗೆ ಮಳಿಗೆಯಲ್ಲೇ ಲೈವ್ ಡೆಮೊ ಮೂಲಕ ವಿವಿಧ ಮಾದರಿಗಳನ್ನು ಪರಿಶೀಲಿಸುವ ಅವಕಾಶವಿದ್ದು, ಬಜಾಜ್ ಫಿನ್ಸರ್ವ್ ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳ ಮೂಲಕ ಸುಲಭ ಇಎಂಐ ಸೌಲಭ್ಯವೂ ಲಭ್ಯವಿದೆ. ಬಿಡುಗಡೆ ಅಂಗವಾಗಿ ವಿಶೇಷ ರಿಯಾಯಿತಿಗಳು ಮತ್ತು ಆಕರ್ಷಕ ಉಡುಗೊರೆಗಳನ್ನೂ ನೀಡಲಾಗುತ್ತಿದೆ. ಹೊಸ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಇನ್ಫಿನಿಕ್ಸ್ ಫೋನ್ ಗಳನ್ನು ಆಯ್ಕೆ ಮಾಡಿ.
ಹೆಚ್ಚಿನ ಮಾಹಿತಿಗಾಗಿ: ಬಲ್ಲಾಳ್ ಮೊಬೈಲ್ಸ್, ಹಳೆ ಪೋಸ್ಟ್ ಆಫೀಸ್ ರಸ್ತೆ, ಉಡುಪಿಸಂಪರ್ಕ ಸಂಖ್ಯೆ: 9886245522

















