ಉಡುಪಿ: ಪ್ರತಿಷ್ಠಿತ ಅಟಲ್ ಭಾರತ್ ಗೌರವ ಸಮ್ಮಾನ್ ಗೆ ತುಳುನಾಡು ಪ್ರಾಪರ್ಟೀಸ್ ಉದಯ ಕೆ ಶೆಟ್ಟಿ ಅವರಿಗೆ ಸಂದಿದೆ.
ಇದು ಭಾರತದ ಶ್ರೇಷ್ಠ ರಾಷ್ಟ್ರೀಯ ಗೌರವಗಳಲ್ಲಿ ಒಂದಾಗಿದ್ದು, ಅವಾರ್ಡ್ಸ್ ಟ್ರಸ್ಟ್ ಆಫ್ ಇಂಡಿಯಾ ಈ ಪ್ರಶಸ್ತಿಯನ್ನು ನೀಡುತ್ತದೆ.

ತುಳುನಾಡು ಪ್ರಾಪರ್ಟೀಸ್ನ ಪ್ರಾಮಾಣಿಕ ಕೆಲಸ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಾಡಿದ ಉತ್ತಮ ಸಾಧನೆಗಳನ್ನು, ನಾಯಕತ್ವವನ್ನು, ಗಮನಿಸಿ, ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ತುಳುನಾಡು ಪ್ರಾಪರ್ಟೀಸ್ ಮಾಲೀಕ ಉದಯ ಕೆ. ಶೆಟ್ಟಿ ಅವರಿಗೆ ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.


















