ಎರಡನೇ ಮದುವೆ ಆಗ್ತಾರಾ ಚಂದನ್ ಶೆಟ್ಟಿ? ಸಂಬಂಧದ ಕುರಿತು ಹೀಗೆ ಹೇಳ್ತಾರೆ ಇವರು

ಪ್ರಸಿದ್ಧ ಗಾಯಕ, ರ್ಯಾಪರ್, ನಟ ಚಂದನ್ ಶೆಟ್ಟಿ ಅವ್ರು 2020 ರಲ್ಲಿ ನಟಿ ನಿವೇದಿತಾ ಗೌಡ ಅವ್ರನ್ನ ಮದ್ವೆ ಆಗಿ 2024 ರಲ್ಲಿ ವೈಯಕ್ತಿಕ ಕಾರಣಗಳಿಂದ ಡೈವೋರ್ಸ್ ಪಡೆದಿದ್ದರು. ಇದಕ್ಕೂ ಮೊದಲೇ ಇಬ್ಬರೂ ಒಪ್ಪಿಕೊಂಡಿದ್ದ ಮುದ್ದು ರಾಕ್ಷಸಿ ಸಿನಿಮಾದ ಶೂಟಿಂಗ್ ಇನ್ನೂ ಬಾಕಿ ಇತ್ತು. ಡೈವೋರ್ಸ್ ಪಡೆದರೂ ಇಬ್ಬರೂ ಈ ಸಿನಿಮಾದ ಶೂಟಿಂಗ್ ಮುಗಿಸಿಕೊಟ್ಟಿದ್ದರು. ಹಾಗೂ ಶೂಟಿಂಗ್ ಸಮಯದಲ್ಲಿ ನಿವೇದಿತಾ ಅವರನ್ನು ಚಂದನ್ ಶೆಟ್ಟಿ ಸಮಾಧಾನ ಮಾಡ್ತಾ ಇರೋ ವೀಡಿಯೋ ಕೂಡಾ ವೈರಲ್ ಆಗಿತ್ತು. ತಮ್ಮ ವೈಯಕ್ತಿಕ ಜೀವನದ ಏರುಪೇರಿನಿಂದ ಹೊರಬಂದು ಇದೀಗ ಸಂಪೂರ್ಣವಾಗಿ ವೃತ್ತಿಜೀವನದತ್ತ ಗಮನ ಹರಿಸಿದ್ದಾರೆ. ಜೀವನದಲ್ಲಿ ಎದುರಾದ ಕಷ್ಟಗಳನ್ನು ಮೀರಿ ಮುಂದೆ ಸಾಗುವ ಮೂಲಕ ಅವರು ಮತ್ತೊಮ್ಮೆ ದೃಢತೆ ತೋರಿಸಿದ್ದಾರೆ.

“ಒಂಟಿತನ ತಪ್ಪಿಸಲು ಬಾಳ ಸಂಗಾತಿ ಮುಖ್ಯ”

ಇದೀಗ ಚಂದನ್ ಶೆಟ್ಟಿಯವರು ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ನಿವೇದಿತಾ ಗೌಡ ಅವರಿಂದ ಡಿವೋರ್ಸ್‌ ಪಡೆದ ನಂತರ, ಅವರ ಎರಡನೇ ಮದುವೆಯ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಈ ಎಲ್ಲಾ ಪ್ರಶ್ನೆಗಳಿಗೂ ಚಂದನ್‌ ಶೆಟ್ಟಿ ಈಗಾಗಲೇ ಸಾಕಷ್ಟು ಬಾರಿ ಸ್ಪಷ್ಟನೆ ನೀಡಿದ್ದಾರೆ. ಆದ್ರೀಗ, “ನಾವು ಯೂತ್‌ ಆಗಿದ್ದಾಗ, ಮೈಯಲ್ಲಿ ಶಕ್ತಿ ಇದ್ದಾಗ ಓಕೆ. ಆದರೆ, ವಯಸ್ಸಾದ ಮೇಲೆ ಸಂಗಾತಿ ಬೇಕಿತ್ತು ಅಂತ ಅನಿಸುತ್ತೆ” ಎಂದಿದ್ದಾರೆ ಚಂದನ್‌ ಶೆಟ್ಟಿ.

ರಿಲೇಶನ್‌ಶಿಪ್‌ನಲ್ಲಿ ಪರೀಕ್ಷೆ ಮುಖ್ಯ

ಸಂಬಂಧಗಳ ಬಗ್ಗೆ ಮಾತನಾಡಿದ ಅವರು, “ನಿರೀಕ್ಷೆಗಿಂತ ಪರೀಕ್ಷೆ ಮುಖ್ಯ. ಒಬ್ಬರನ್ನು ಒಬ್ಬರು ಅರ್ಥಮಾಡಿಕೊಳ್ಳುವುದು, ಹೊಂದಾಣಿಕೆ ಸಾಧಿಸುವುದು ಅತ್ಯಗತ್ಯ. ಈ ಬಾರಿ ಸ್ವಲ್ಪ ಸಮಯ ತೆಗೆದುಕೊಂಡು ಯೋಚಿಸಿ ನಿರ್ಧಾರ ಮಾಡುತ್ತೇನೆ” ಎಂದು ಹೇಳಿದ್ದಾರೆ.

ಡಿಪ್ರೆಶನ್ ಬಗ್ಗೆ ಸ್ಪಷ್ಟನೆ

ಕೆಲವರು ಕೇಳುತ್ತಿರುವ ಡಿಪ್ರೆಶನ್ ವಿಚಾರಕ್ಕೂ ಚಂದನ್ ಶೆಟ್ಟಿ Chandan Shetty ಸ್ಪಷ್ಟನೆ ನೀಡಿದ್ದಾರೆ. “ನಾನು ಡಿಪ್ರೆಶನ್‌ನಲ್ಲಿ ಇಲ್ಲ. ಜೀವನದಲ್ಲಿ ನೋವುಗಳು ಸಹಜ. ಗಾಯವಾದಾಗ ಅದು ಗುಣವಾಗಲು ಸಮಯ ಬೇಕು. ಈಗ ನಾನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಹೆಸರು ಮಾಡುವ ಕನಸು

ಇದೀಗ ತಮ್ಮ ಸಂಪೂರ್ಣ ಗಮನವನ್ನು ಕೆಲಸದ ಮೇಲೆ ಕೇಂದ್ರೀಕರಿಸಿರುವ ಅವರು, “ನನ್ನ ಹಾಡುಗಳು ಜಾಗತಿಕ ಮಟ್ಟದಲ್ಲಿ ಹಿಟ್ ಆಗಬೇಕು. ಇನ್ನೂ ದೊಡ್ಡ ಮಟ್ಟದ ಹೆಸರು ಮಾಡಬೇಕು ಅನ್ನೋದು ನನ್ನ ಕನಸು” ಎಂದು ತಿಳಿಸಿದ್ದಾರೆ.

ಹೊಸ ಹಾದಿಯಲ್ಲಿ ಚಂದನ್ ಶೆಟ್ಟಿ

ವೈಯಕ್ತಿಕ ಸಂಕಷ್ಟಗಳನ್ನು ಮೀರಿ ಹೊಸ ಹಾದಿಯಲ್ಲಿ ನಡೆಯುತ್ತಿರುವ Chandan Shetty ಅವರ ಮಾತುಗಳು ಅಭಿಮಾನಿಗಳಿಗೆ ಪ್ರೇರಣೆಯಾಗಿದೆ.