ಉಡುಪಿ: 2026 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆ-2 ಕ್ಕೆ ನೋಂದಣಿಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಏಪ್ರಿಲ್ 17 ರ ವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
2026 ರಲ್ಲಿ ರೆಗ್ಯೂಲರ್ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊoಡು ಮತ್ತು ಮೊದಲನೇ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೇ ಆನ್ಲೈನ್ http://tinyurl.com/mvp9k6es ಲಿಂಕ್ ಮೂಲಕ ಅಥವಾ ಅಭ್ಯರ್ಥಿಗಳು ಸಂಬoಧಿಸಿದ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ PU EXAM PORTAL ನಲ್ಲಿ ಪರೀಕ್ಷೆ-2 ಕ್ಕೆ ನೋಂದಾಯಿಸಿಕೊಳ್ಳಬಹುದಾಗಿದೆ.
ಸಂಬoಧಿಸಿದ ಕಾಲೇಜಿನ ಪ್ರಾಂಶುಪಾಲರುಗಳಿಗೆ 2026 ರಲ್ಲಿ ಮೊದಲನೆ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ಹಾಗೂ ಕಾರಣಾಂತರಗಳಿoದ ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳನ್ನು ತಮ್ಮ ಪಿ.ಯು ಎಕ್ಸಾಮ್ ಪೋರ್ಟಲ್ ಲಾಗಿನ್ ಮುಖಾಂತರ ನೋಂದಣಿ ಮಾಡಿಕೊಳ್ಳಬಹುದಾಗಿದೆ.
2026 ರಲ್ಲಿ ರೆಗ್ಯೂಲರ್ ವಿದ್ಯಾರ್ಥಿಗಳಾಗಿ ನೋಂದಾಯಿಸಿಕೊoಡು ಮತ್ತು ಮೊದಲನೇ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೆ ಪರೀಕ್ಷೆ-2 ಕ್ಕೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದೆ.
ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಪರೀಕ್ಷೆ-2 ಕ್ಕೆ ನೋಂದಾಯಿಸುವoತೆ ಮಾಡಬೇಕು. ಪರೀಕ್ಷೆಗೆ ನೋಂದಾಯಿಸಿಕೊoಡ ವಿದ್ಯಾರ್ಥಿಗಳಿಗೆ ಪ್ರವೇಶಪತ್ರಗಳನ್ನು ನಿಗಧಿತ ಸಮಯದಲ್ಲಿ ಸಂಬoಧಿಸಿದ ಕಾಲೇಜಿನ ಪ್ರಾಂಶುಪಾಲರುಗಳ ಲಾಗಿನ್ ನಲ್ಲಿ ಲಭ್ಯವಿರಲಿದೆ.
ದ್ವಿತೀಯ ಪಿ.ಯು.ಸಿ ಪರೀಕ್ಷೆ-2 ರ ದಿನಾಂಕಗಳನ್ನು ಮರುನಿಗಧಿಪಡಿಸಲಾಗಿದ್ದು, ಪರೀಕ್ಷೆಗಳು ಏಪ್ರಿಲ್ 30 ರಿಂದ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಮಂಡಲಿಯ ಜಾಲತಾಣದ ಪಿಯುಸಿ ವಿದ್ಯಾರ್ಥಿ ಅಂಕಣದಲ್ಲಿ ಲಭ್ಯಗೊಳಿಸಲಾದ ಮಾದರಿ ಪ್ರಶ್ನೆ ಪತ್ರಿಕೆಗಳ ಅನ್ವಯ ಪರೀಕ್ಷೆ-2 ಕ್ಕೆ ಯಾವುದೇ ಆತಂಕಗಳಿಲ್ಲದೆ, ಶಾಂತ ಚಿತ್ತತೆಯಿಂದ ಸಿದ್ಧತೆಯನ್ನು ಮಾಡಿಕೊಂಡು ಪರೀಕ್ಷೆಗೆ ಹಾಜರಾಗುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಅಧ್ಯಕ್ಷರ ಕಚೇರಿ ಪ್ರಕಟಣೆ ತಿಳಿಸಿದೆ.

















