ಮಣಿಪಾಲ: ಏಪ್ರಿಲ್ 19 ರಂದು ಆರ್ ಎಸ್ ಬಿ ಸಮಾಜದಿಂದ ವಧುವರ ಸಮಾವೇಶ.

ಉಡುಪಿ: ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ(ರಿ) ಮಣಿಪಾಲ, ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ವೇದಿಕೆ (ರಿ ) ಮಣಿಪಾಲ, ಹಾಗೂ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜ(ರಿ) ಬೆಂಗಳೂರು ಇದರ ಅಂಗಸಂಸ್ಥೆಯಾದ ಆರ್ ಎಸ್ ಬಿ ಅನುಬಂಧ ವಿವಾಹ ವೇದಿಕೆ ಬೆಂಗಳೂರು ಇವರುಗಳ ಜಂಟಿ ಆಶ್ರಯದಲ್ಲಿ ಏಪ್ರಿಲ್ 19 ರಂದು ಸಮಾಜದ ವಿವಾಹ ಅಪೇಕ್ಷಿತ ಯುವಕ, ಯುವತಿಯರಿಗೆ ವಧು ವರರ ಸಮಾವೇಶವು ಮಣಿಪಾಲದ ಆರ್ ಎಸ್ ಬಿ ಸಭಾಭವನದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ ಎಂದು ಆರ್ ಎಸ್ ಬಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ರೂಪ ನಾಯಕ್ ದೇವಿನಗರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.