ಅಂಡಮಾನ್ ಸಮುದ್ರದಲ್ಲಿ ಹಡಗು ದುರಂತ: ಮಕ್ಕಳು ಸೇರಿ 250 ಜನ ನಾಪತ್ತೆ?

ಢಾಕಾ: ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶಿ ಪ್ರಜೆಗಳನ್ನು ಕರೆದೊಯ್ಯುತ್ತಿದ್ದ ಹಡಗು ಅಂಡಮಾನ್ ಸಮುದ್ರದಲ್ಲಿ ಮಗುಚಿ ಬಿದ್ದು ಮಕ್ಕಳು ಸೇರಿದಂತೆ ಸುಮಾರು 250 ಮಂದಿ ಕಾಣೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಡಗು ದಕ್ಷಿಣ ಬಾಂಗ್ಲಾದೇಶದ ಟೆಕ್ನಾಫ್‌ ಬಂದರಿನಿಂದ ಹೊರಟು ಮಲೇಷ್ಯಾಕ್ಕೆ ತೆರಳುತ್ತಿತ್ತು.

ಹಡಗು ಭಾರೀ ಗಾಳಿ, ಎತ್ತರದ ಅಲೆಗಳು ಮತ್ತು ಅತಿಯಾದ ಜನಸಂದಣಿಯಿಂದಾಗಿ ಸಮುದ್ರದಲ್ಲಿ ಮುಳುಗಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಉದ್ಯೋಗ, ಹೆಚ್ಚಿನ ವೇತನದ ಭರವಸೆ ಹಾಗೂ ಕಳ್ಳಸಾಗಣೆ ಜಾಲಗಳಿಂದ ಹರಡುವ ತಪ್ಪು ಮಾಹಿತಿಯ ಪರಿಣಾಮವಾಗಿ ರೋಹಿಂಗ್ಯಾ ಮತ್ತು ಬಾಂಗ್ಲಾದೇಶದ ನಾಗರಿಕರು ಈ ಪ್ರಯಾಣಕ್ಕೆ ಪ್ರೇರಿತರಾಗಿದ್ದರು ಎಂದು ಹೇಳಲಾಗಿದೆ. ಈ ಘಟನೆ ದೀರ್ಘಕಾಲದ ಬಲವಂತದ ಸ್ಥಳಾಂತರದ ಗಂಭೀರ ಪರಿಣಾಮಗಳನ್ನು ತೋರಿಸುತ್ತದೆ ಎಂದು ಯುಎನ್‌ಎಚ್‌ಸಿಆರ್ ಹೇಳಿದೆ.