ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2- ಸಿಇಟಿ ಗೆ ಯಾವ ಅಂಕಗಳನ್ನು ಪರಿಗಣಿಸುತ್ತಾರೆ ಎಂಬ ಸ್ಪಷ್ಟನೆ ಸಿಕ್ಕಿದೆ

ಬೆಂಗಳೂರು: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆಗೆ ಯಾವ ಅಂಕಗಳನ್ನು ಪರಿಗಣಿಸಲಾಗುತ್ತದೆ ಎಂಬ ಕುರಿತು ಹಲವು ಗೊಂದಲಗಳು ಉಂಟಾಗಿದೆ. ಇದರ ಕುರಿತು ಸ್ಪಷ್ಟನೆ ನೀಡಿದ್ದಾರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.

ದ್ವಿತೀಯ ಪಿಯುಸಿ (2nd PUC) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ-1 ಮತ್ತು ಪರೀಕ್ಷೆ-2 ಎರಡರಲ್ಲೂ ಬರೆದಿದ್ದರೆ, ಯಾವ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂದಿದೆಯೋ ಅದನ್ನೇ CET ರ್ಯಾಂಕ್‌ಗೆ ಪರಿಗಣಿಸಲಾಗುತ್ತದೆ

  • ಅಂದರೆ:
    • ಪರೀಕ್ಷೆ-1ನಲ್ಲಿ ಕಡಿಮೆ ಬಂದಿದ್ರೆ
    • ಪರೀಕ್ಷೆ-2ನಲ್ಲಿ ಮತ್ತೆ ಬರೆದು ಹೆಚ್ಚು ಅಂಕ ಗಳಿಸಿದ್ರೆ
      ಆ ಹೆಚ್ಚಿನ ಅಂಕವೇ ಲೆಕ್ಕಕ್ಕೆ ಬರುತ್ತದೆ
  • KEA ಸ್ಪಷ್ಟಪಡಿಸಿರುವ ಮುಖ್ಯ ಅಂಶಗಳು:
    • ಎರಡೂ ಪರೀಕ್ಷೆಗಳ ಫಲಿತಾಂಶ ಬಂದ ನಂತರವೇ CET ಫಲಿತಾಂಶ ಪ್ರಕಟವಾಗುತ್ತದೆ
    • “ಪರೀಕ್ಷೆ-2 ಅಂಕಗಳನ್ನು ಪರಿಗಣಿಸುವುದಿಲ್ಲ” ಅನ್ನೋದು ಸುಳ್ಳು ಮಾಹಿತಿ
    • ವಿದ್ಯಾರ್ಥಿಗಳು ವದಂತಿಗಳಿಗೆ ಕಿವಿ ಕೊಡಬಾರದು

ಹಾಗಾಗಿ ನೀವು ಎರಡೂ ಪರೀಕ್ಷೆ ಬರೆದಿದ್ದರೆ ಚಿಂತಿಸಬೇಕಾಗಿಲ್ಲ ಯಾವ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುತ್ತೀರೋ ಅದೇ ಅಂಕಗಳನ್ನೆ ತೆಗೆದುಕೊಳ್ಳಲಾಗುತ್ತದೆ. ನಿಶ್ಚಿಂತೆಯಿಂದ ಮುಂಬರುವ ಪರೀಕ್ಷೆಗಳ ಕಡೆಗೆ ಗಮನ ಕೊಡಬಹುದು.