ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜು, ಕಲ್ಯಾಣಪುರದಲ್ಲಿ ಸಂವಿಧಾನ ಶಿಲ್ಪಿ ಮಹಾನ್ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್ ರವರ ಜನ್ಮದಿನವನ್ನು ಆಚರಿಸಲಾಯಿತು.
ಪ್ರಾಂಶುಪಾಲರಾದ ರಾಮಕೃಷ್ಣ ಹೆಗಡೆ ಮಾತನಾಡಿ ಜಗತ್ತಿನ ಅತಿ ಶ್ರೇಷ್ಠ ಪ್ರಜಾಪ್ರಭುತ್ವಕ್ಕೆ ಡಾ. ಬಿ.ಆರ್ ಅಂಬೇಡ್ಕರ್ ರ ಕೊಡುಗೆ ವಿಶೇಷವಾದದ್ದು. ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದ ಮೂಲಕ ರಕ್ಷಣೆ ಜೀವಿಸುವ ಹಕ್ಕು ನೀಡಿದ ಮತ್ತು ಹಕ್ಕುಗಳಿಗಾಗಿ ಹೋರಾಡಲು ಶಿಕ್ಷಣವೇ ಪ್ರಮುಖ ಅಸ್ತ್ರ ಎಂದು ತೋರಿಸಿದ್ದಾರೆ.
ಹಕ್ಕುಗಳಷ್ಟೇ ಅಲ್ಲದೆ ಕರ್ತವ್ಯವನ್ನು ತಿಳಿಸಿದ್ದಾರೆ. ಭಾರತೀಯತೆಗೆ ಹೊಸ ಅರ್ಥ ನೀಡಿ, ಕಡೆಗಣಿಸಲ್ಪಟ್ಟ ಸಮಾಜದ ಧ್ವನಿಯಾದವರು ಅಂಬೇಡ್ಕರ್ ರವರು ಎಂದು ನುಡಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ತ್ರಿಶಾ ಕಾಲೇಜಿನ ಟ್ರಸ್ಟಿ ಕಾರ್ತಿಕ್ ಭಂಡಾರಿ, ಉಪಪ್ರಾಂಶುಪಾಲರಾದ ಜೋಯಲ್ ಫೆರ್ನಾಂಡಿಸ್, ಉಪನ್ಯಾಸಕ ವರ್ಗದವರು, ಉಪನ್ಯಾಸಕೇತರ ಬಳಗದವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪುಷ್ಪ ನಮನ ಸಲ್ಲಿಸಿದರು.

















