ಉಡುಪಿ: ಕಾಪು ಗ್ರಾವಿಟಿ ಡ್ಯಾನ್ಸ್ ಕ್ರೀವ್ಸ್ ಆಯೋಜಿಸಿರುವ 3ನೇ ವಷ೯ದ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರವನ್ನು ಕಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಗ್ರಾವಿಟಿ ಡ್ಯಾನ್ಸ್ ಕ್ರೀವ್ಸ್ ಇದರ ಗೌರವ ಅಧ್ಯಕ್ಷರು ದಿವಾಕರ ಬಿ ಶೆಟ್ಟಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಯೋಧ ಕಾಪುವಿನ ಸಮಾಜ ಸೇವಕರಾದ ರಾಜೇಶ್ ಜಿ ಮೆಂಡನ್ ಮಾತನಾಡಿ ಬೇಸಿಗೆ ಶಿಬಿರ ಚಿಕ್ಕ ಮಕ್ಕಳಿಗಾಗಿ ನಡೆಯುತ್ತಿದ್ದು, ಇದರಲ್ಲಿ ಮಕ್ಕಳಿಗೆ ಆಟೋಟ ಸ್ಫರ್ಧೆ ಡ್ಯಾನ್ಸ್ ಕಲಿಯುವಿಕೆ ಮಕ್ಕಳಿಗೆ ಆಸಕ್ತಿ ತುಂಬಿ ಮುಂದಿನ ದಿನ ಮಕ್ಕಳಿಗೆ ಬಾರಿ ಪ್ರಯೋಜನವಾಗಲಿದೆ. ಈ ಮಕ್ಕಳೊಂದಿಗೆ ಪೋಷಕರು ಬಂದು ಮಕ್ಕಳ ಚಟುವಟಿಕೆ ಸ್ವತಃ ವೀಕ್ಷಿಸಿ ಮಕ್ಕಳ ಮುಂದಿನ ಪೀಳಿಗೆಗೆ ದೇಶದಲ್ಲಿ ದೊಡ್ದ ವ್ಯಕ್ತಿಗಳಾಗಿ ರೂಪಿಸಲು ಸಹಕಾರಿಯಾಗಿದೆ.
ಈ ಕಾರ್ಯಕ್ರಮ ತುಂಬಾ ಒಳ್ಳೆಯ ಕಾರ್ಯಕ್ರಮ. ಯಾವುದೇ ಅಭಿಲಾಷೆ ಇಲ್ಲದ ಸಂಘಟಕರು ಮಾಡುವುದು ತುಂಬಾ ಒಳ್ಳೆಯ ಕೆಲಸವಾಗಿದೆ. ತರಬೇತುದಾರರಾದ ಕನ್ನಡ ಉಪನ್ಯಾಸಕರು ರಂಗಭೂಮಿ ಕಲಾವಿದರಾದ ರಾಮಾಂಜಿ ಭಾಗವಹಿಸಿದರು.
ಸಮಾರಂಭದಲ್ಲಿ ಗ್ರಾವಿಟಿ ಡ್ಯಾನ್ಸ್ ಕ್ರೀವ್ ಅಧ್ಯಕ್ಷ ರತ್ನಾಕರ, ಸಂಚಾಲಕ ರೋಶನ್,ಸದಸ್ಯರಾದ ಮೋಹನ್ ಮುರಳಿ, ಪ್ರಜ್ವಲ್ ಶೆಟ್ಟಿ, ಕೀರ್ತನ್ ಮಾನ್ಯ ಪೂಜಾರಿ, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಡ್ಯಾನ್ಸ್ ಗ್ರೂಪಿನ ಸದಸ್ಯರಾದ ಕಾವ್ಯ ಅಂಚನ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

















