ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ‘ಜೆನೆರೇಟಿವ್ ಎಐ’ ಸಮರ್ ಕ್ಯಾಂಪ್: ಶಿಬಿರದಲ್ಲಿ ಏನೇನಿದೆ? ಇಲ್ಲಿದೆ ಮಾಹಿತಿ

ಮಣಿಪಾಲ: ಮಣಿಪಾಲದ ಎಂಎಸ್‌ಡಿಸಿ (Manipal Skill Development Center) ವತಿಯಿಂದ ವಿದ್ಯಾರ್ಥಿಗಳಿಗೆ ವಿಶೇಷವಾದ “Mastering Generative AI Tools” ಎಂಬ 10 ದಿನಗಳ ಸಮರ್ ಕ್ಯಾಂಪ್ ನ್ನು ಏ. 20-ಏ 30 ರವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ತರಗತಿಗಳು ನಡೆಯಲಿವೆ.

6ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಈ ತರಬೇತಿ ಕಾರ್ಯಕ್ರಮದಲ್ಲಿ ChatGPT, Gemini ಸೇರಿದಂತೆ ವಿವಿಧ ಎಐ ಉಪಕರಣಗಳ ಬಳಕೆ, ಪ್ರಾಂಪ್ಟ್ ಎಂಜಿನಿಯರಿಂಗ್, ಮಲ್ಟಿಮೀಡಿಯಾ ಸೃಜನಶೀಲತೆ, ಪ್ರೆಸೆಂಟೇಶನ್ ಮತ್ತು ಡಾಕ್ಯುಮೆಂಟ್ ತಯಾರಿ, ವಿಡಿಯೋ-ಆಡಿಯೋ ಸಿಂಥಸಿಸ್, ಹಾಗೂ ಆಫೀಸ್ ಸ್ಯೂಟ್ಸ್‌ನಲ್ಲಿ ಎಐ ಉಪಯೋಗಿಸುವ ವಿಧಾನಗಳನ್ನು ಕಲಿಸಲಾಗುತ್ತದೆ.ಇದರ ಜೊತೆಗೆ ಎಐನ ನೈತಿಕತೆ, ಸುರಕ್ಷತೆ ಮತ್ತು ಗೌಪ್ಯತೆ ಕುರಿತ ಮಹತ್ವದ ಅಂಶಗಳನ್ನೂ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತದೆ.

ಈ ಕ್ಯಾಂಪ್‌ನಲ್ಲಿ Hands-on Training, ವಾಸ್ತವಿಕ ಪ್ರಾಜೆಕ್ಟ್‌ಗಳು ಇರಲಿದ್ದು ಅನುಭವೀ ತರಬೇತುದಾರರು ಹಾಗೂ ಎಐ ಕ್ಷೇತ್ರದ ವೃತ್ತಿ ಪರಿಣತರಿಂದ ಅರಿವು ನೀಡಲಾಗುತ್ತದೆ. ಕೋರ್ಸ್ ಪೂರ್ಣಗೊಳಿಸಿದವರಿಗೆ ಎಂಎಸ್‌ಡಿಸಿ ವತಿಯಿಂದ ಪ್ರಮಾಣಪತ್ರ ನೀಡಲಾಗುತ್ತದೆ.

ಕಾರ್ಯಕ್ರಮವು ಜೂನಿಯರ್ ಬ್ಯಾಚ್ (6–8ನೇ ತರಗತಿ) ಹಾಗೂ ಸೀನಿಯರ್ ಬ್ಯಾಚ್ (9–12ನೇ ತರಗತಿ) ಎಂದು ವಿಭಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8123165069 ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.,