ಭಾರತದ ಶ್ರೇಷ್ಠ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ 92ನೇ ವಯಸ್ಸಿನಲ್ಲಿ ಬಹು ಅಂಗಾಗ ವೈಫಲ್ಯದಿಂದ ನಿಧನ

ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ Asha Bhosle ಅವರು 92ನೇ ವಯಸ್ಸಿನಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾದರು. ಹೃದಯ ಸಂಬಂಧಿ ಸಮಸ್ಯೆಯಿಂದ ಶನಿವಾರ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಇಂದು ಮಧ್ಯಾನ 1 ಗಂಟೆಯ ಸುಮಾರಿಗೆ ಇಹಲೋಕ ತ್ಯಜಿಸಿರುತ್ತಾರೆ ಎಂದು ವಾರ್ತಾ ಮೂಲಗಳು ತಿಳಿಸಿವೆ.

ಅಂತಿಮ ವಿಧಿ ವಿಧಾನಗಳು ನಾಳೆ ಸಂಜೆ 4 ಗಂಟೆಗೆ ಶಿವಾಜಿ ಪಾರ್ಕ್ ನಲ್ಲಿ ನಡೆಯಲಿದ್ದು, ಬೆಳಗ್ಗೆ 11 ಗಂಟೆಯ ನಂತರ ಸಾರ್ವಜನಿಕರ ದರ್ಶನಕ್ಕೆ ಲಭ್ಯವಿರಲಿದೆ ಎಂದು ಮೊಮ್ಮಗಳು ಝನಾಯ್ ಬೋಸ್ಲೆ ತಿಳಿಸಿದ್ದಾರೆ.

ಭಾರತೀಯ ಸಂಗೀತ ಲೋಕಕ್ಕೆ ಅವರ ಅಪಾರ ಕೊಡುಗೆ

ಆಶಾ ಬೋಸ್ಲೆ Asha Bhosle ಭಾರತೀಯ ಚಿತ್ರರಂಗದ ಅತ್ಯಂತ ಬಹುಮುಖ ಹಾಗೂ ಜನಪ್ರಿಯ ಗಾಯಕಿಯರಲ್ಲಿ ಒಬ್ಬರಾಗಿದ್ದಾರೆ. 1940ರ ದಶಕದಿಂದ ಆರಂಭವಾದ ಅವರ ಗಾಯನ ಪಯಣವು ಸಾವಿರಾರು ಹಾಡುಗಳ ಮೂಲಕ ಭಾರತೀಯ ಸಂಗೀತ ಇತಿಹಾಸದಲ್ಲಿ ಅಳಿಯದ ಗುರುತು ಮೂಡಿಸಿದೆ.