ಸ್ಯಾಂಡಲ್ ವುಡ್ ಇತಿಹಾಸದಲ್ಲಿ ʻಆನಂದ್ʼ, ʻಮನ ಮೆಚ್ಚಿದ ಹುಡುಗಿʼ, ʻರಣರಂಗʼ, ʻಸಂಯುಕ್ತಾʼ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ ಈ ಜೋಡಿ ಶಿವರಾಜ್‌ಕುಮಾರ್ ಮತ್ತು ಸುಧಾರಾಣಿ ಅವರದ್ದು. ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಜೋಡಿ. ಇದೀಗ ಈ ಸಿನಿಜೋಡಿಗಳ ಬಗ್ಗೆ ಲೈಕ್ಸ್ ಮತ್ತು ವ್ಹೀವ್ಸ್‌ಗಾಗಿ ಕೆಲ ಸೋಶಿಯಲ್ ಮೀಡಿಯಾ ಪೇಜ್‌ಗಳು ಅತಿರೇಕದ ವರ್ತನೆ ತೋರಿದ್ದಾರೆ.

ಹೀಗಿದೆ ಸೋಷಿಯಲ್ ಮೀಡಿಯಾ ಪೋಸ್ಟ್
ನಟಿ ಸುಧಾರಾಣಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಪೋಸ್ಟ್ ನಲ್ಲಿ “ಶಿವರಾಜ್‌ಕುಮಾರ್ ಅವರನ್ನ ಪ್ರೀತಿಸಿದ್ದೆ. ಸುಧಾರಾಣಿ ಅವರು ಅಂದು ಶಿವಣ್ಣನನ್ನ ಮದುವೆಯಾಗಲು ಬಯಸಿದ್ದರು! ಆನಂದ್ ಸಿನಿಮಾ ಚಿತ್ರೀಕರಣ ಸಮಯದಲ್ಲಿ ನಟಿ ಸುಧಾರಾಣಿ ಅವರಿಗೆ ಶಿವರಾಜ್‌ಕುಮಾರ್ ಕಂಡರೆ ಭಯವಿತ್ತು. ನಂತರ ಅವರ ಮೇಲೆ ಪ್ರೀತಿ ಹುಟ್ಟಿತು ಮತ್ತು ಮದುವೆಯಾಗುವ ಆಸೆಯೂ ಇತ್ತು. ಆದರೆ, ಡಾ. ರಾಜ್‌ಕುಮಾರ್ ಅವರ ಮಗ ಎಂಬ ಕಾರಣದಿಂದ ಅವರು ಇದನ್ನ ಯಾರಿಗೂ ಹೇಳದೆ ಸುಮ್ಮನಾಗಿದ್ದರು. ಈ ವಿಷಯವನ್ನ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ” ಎಂದು ಸುಳ್ಳು ಸುದ್ದಿಯೊಂದನ್ನ ಹರಿಬಿಡಲಾಗಿದೆ.

ಸುಧಾರಾಣಿ ತೀವ್ರ ಅಸಮಾಧಾನ
ಅಪಪ್ರಚಾರ ಹರಡುತ್ತಿರುವ ಬಗ್ಗೆ ಖಡಕ್ ಆಗಿ ಪ್ರತಿಕ್ರಿಯಿಸಿರುವ ಅವರು, “ಅಪಪ್ರಚಾರ! ನಕಲಿ ಸುದ್ದಿ.. ದಯವಿಟ್ಟು ಕೆಲವು ಮೂಲಭೂತ ನೀತಿಗಳನ್ನ ತೋರಿಸಿ. ಕೇವಲ ವೀಕ್ಷಣೆಗಳನ್ನ ಪಡೆಯಲು ಜನರು ಸುಳ್ಳು ಮಾಹಿತಿಯನ್ನ ಹರಡುವುದನ್ನ ನೋಡುವುದು ನಿರಾಶಾದಾಯಕವಾಗಿದೆ. ಕಷ್ಟಪಟ್ಟು ಕೆಲಸ ಮಾಡಿ, ಪ್ರಾಮಾಣಿಕವಾಗಿರಿ. ನಿಮ್ಮ ಯಶಸ್ಸನ್ನ ಸರಿಯಾದ ರೀತಿಯಲ್ಲಿ ಗಳಿಸಿ” ಎಂದಿದ್ದಾರೆ ಅಲ್ಲದೇ, ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

















