ಉಡುಪಿ: ಮಣಿಪಾಲ Manipal Skill Development Center ವತಿಯಿಂದ ಏಪ್ರಿಲ್ 20 ರಿಂದ ಏಪ್ರಿಲ್ 30ರವರೆಗೆ “ಆರ್ಟ್ & ಕ್ರಾಫ್ಟ್ ಕ್ಯಾಂಪ್” ಆಯೋಜಿಸಲಾಗಿದೆ.
ಪ್ರತಿದಿನ ಬೆಳಗ್ಗೆ 10:30ರಿಂದ ಮಧ್ಯಾಹ್ನ 12:30ರವರೆಗೆ ನಡೆಯುವ ಈ ಶಿಬಿರದಲ್ಲಿ ಮಕ್ಕಳ ಸೃಜನಶೀಲತೆಯನ್ನು ಉತ್ತೇಜಿಸುವ ವಿವಿಧ ಚಟುವಟಿಕೆಗಳು ಇರಲಿವೆ. ಶಿಬಿರದಲ್ಲಿ ಮೂಲ ಚಿತ್ರಕಲೆ, ಪೆನ್ಸಿಲ್ ಶೇಡಿಂಗ್, ಕ್ಲೇ ಮಾದರಿಕರಣ, ಲ್ಯಾಂಡ್‌ಸ್ಕೇಪ್ ಡ್ರಾಯಿಂಗ್, ಪೇಂಟಿಂಗ್ ಹಾಗೂ ಹ್ಯಾಂಡ್‌ಕ್ರಾಫ್ಟ್ ತರಬೇತಿಗಳು ನೀಡಲಾಗುತ್ತದೆ.
10 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನವರಿಗೆ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದ್ದು, ಎಲ್ಲಾ ಅಗತ್ಯ ವಸ್ತುಗಳನ್ನು ಸಂಸ್ಥೆಯೇ ಒದಗಿಸಲಿದೆ. ಶಿಬಿರದ ಶುಲ್ಕವನ್ನು ರೂ.1000/ ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ +91 8123165069 ಸಂಪರ್ಕಿಸಬಹುದು. ಸೃಜಲಶೀಲತೆಗಿರುವ ಈ ವೇದಿಕೆಯನ್ನು ಬಳಸಿಕೊಳ್ಳಿರಿ.

















