ಎ. 7 ರಂದು ‘ಹಿರಿಯಡ್ಕದಲ್ಲಿ ಶ್ಯಾಮಿಲಿ ಸ್ಟ್ರಿಂಗ್ಸ್’ ಅದ್ಧೂರಿ ಉದ್ಘಾಟನೆ, ವಿವಿಧ ಸಮಾರಂಭಗಳಿಗೆ ಭವ್ಯ ಸಭಾಂಗಣ

ಉಡುಪಿ: ಹಿರಿಯಡಕದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡಿರುವ ‘ಶ್ಯಾಮಿಲಿ ಸ್ಟ್ರಿಂಗ್ಸ್’ ಕನ್ವೆನ್ಷನ್ ಸೆಂಟರ್‌ ಏಪ್ರಿಲ್ 7 ರಂದು ಉದ್ಘಾಟನೆಗೊಳ್ಳಲಿದೆ.

ಕೋಸ್ಟಲ್‌ವುಡ್ ರೆಸಾರ್ಟ್ ಉಡುಪಿ ಸಹಯೋಗದಲ್ಲಿ ನಿರ್ಮಿತವಾಗಿರುವ ಈ ಭವ್ಯ ಸಂಕೀರ್ಣವು, ವಿವಿಧ ಸಮಾರಂಭಗಳನ್ನು ಒಂದೇ ಸ್ಥಳದಲ್ಲಿ ಆಯೋಜಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಡಾ| ಜಿ. ಶಂಕರ್ ಅವರ ಕನಸಿನ ಯೋಜನೆಯಾಗಿ ರೂಪುಗೊಂಡಿರುವ ಈ ಕೇಂದ್ರವು ಕೈಗೆಟಕುವ ದರದಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಹೊಂದಿದೆ.

ಶ್ಯಾಮಿಲಿ ಸ್ಟ್ರಿಂಗ್ಸ್’ ನಲ್ಲಿ ಏನೇನಿದೆ?

ಸುಮಾರು 1,000 ಮಂದಿಗೆ ಆಸನ ವ್ಯವಸ್ಥೆಯುಳ್ಳ ಸಂಪೂರ್ಣ ಹವಾನಿಯಂತ್ರಿತ ‘ಶಾನ್ವಿಕ ಕನ್ವೆನ್ಷನ್ ಸೆಂಟರ್’ ಹಾಗೂ ಊಟದ ವ್ಯವಸ್ಥೆಗೆ ಪ್ರತ್ಯೇಕ ‘ಶನಾಯ ಗ್ರ್ಯಾಂಡ್ ಹಾಲ್’ಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಗೆ ಪ್ರತ್ಯೇಕ ಅಡುಗೆಮನೆ ವ್ಯವಸ್ಥೆಯೂ ಲಭ್ಯವಿದೆ. ಸಭಾಂಗಣದ ಸಮೀಪದಲ್ಲೇ ಶ್ರೀ ಪ್ರಸನ್ನ ಗಣಪತಿ ಮಂದಿರವೂ ಇದೆ. ಇದಲ್ಲದೆ, 300ಕ್ಕೂ ಹೆಚ್ಚು ವಾಹನಗಳಿಗೆ ಅವಕಾಶ ಕಲ್ಪಿಸುವ ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಮಕ್ಕಳ ಆಟದ ಮೈದಾನ ಮತ್ತು ತೆರೆದ ಸಭಾಂಗಣಗಳೂ ಇಲ್ಲಿ ಸಿದ್ಧಗೊಂಡಿವೆ.

‘ಶ್ಯಾಮಿಲಿ ಗ್ರೀನ್ಸ್’ ಎಂಬ ಓಪನ್ ಗಾರ್ಡನ್‌ನಲ್ಲಿ ಮೆಹಂದಿ, ಹಳದಿ, ನೈಟ್ ಪಾರ್ಟಿ ಹಾಗೂ ಡೆಸ್ಟಿನೇಶನ್ ಮದುವೆಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. 30 ಎಸಿ ಡಿಲೆಕ್ಸ್ ರೂಮ್‌ಗಳು ಹಾಗೂ ಪ್ರತ್ಯೇಕ ವಿಲ್ಲಾಗಳಿದ್ದು, ಅತಿಥಿಗಳ ವಾಸ್ತವ್ಯಕ್ಕೂ ಅನುಕೂಲವಾಗಿದೆ.

ಇದರ ಜೊತೆಗೆ ಈಜುಕೊಳ, ಜಿಮ್, ರಿಕ್ರಿಯೇಷನ್ ಕ್ಲಬ್ ಮತ್ತು ಫ್ಯಾಮಿಲಿ ರೆಸ್ಟೋರೆಂಟ್ ಸೇರಿದಂತೆ ವಿವಿಧ ಸೌಲಭ್ಯಗಳು ಲಭ್ಯವಿದ್ದು, ಎಲ್ಲಾ ವಿಧದ ಸಮಾರಂಭಗಳಿಗೆ ಸಮಗ್ರ ಕೇಂದ್ರವಾಗಲಿದೆ. ಇನ್ನೂ ಅನೇಕ ವಿಶೇಷತೆಗಳೊಂದಿಗೆ ನಾಳೆ ಲೋಕಾರ್ಪಣೆಗೊಳ್ಳಲಿರುವ ಶ್ಯಾಮಿಲಿ ಸ್ಟ್ರಿಂಗ್ಸ್ ನಿಮ್ಮ ಕನಸಿನ ಅದ್ಧೂರಿ ಕಾರ್ಯಕ್ರಮಗಳಿಗೆ ದಿ ಬೆಸ್ಟ್ ಜಾಗವಾಗಿದೆ.