ಜೀವನದಲ್ಲಿ ನಿಮ್ಮದೇ ಕಾರು ಬೇಕೆಂಬ ಕನಸು ಇದೆಯಾ? ₹10 ಲಕ್ಷದ ಕಾರನ್ನು ಕೇವಲ ₹2 ಲಕ್ಷಕ್ಕೆ ಕೊಳ್ಳುವ ಸುವರ್ಣಾವಕಾಶ—ಮಿಸ್ ಮಾಡಿಕೊಳ್ಳಬೇಡಿ!

ನಮ್ಮದೇ ಆದ ಸ್ವಂತ ಕಾರನ್ನು ಕೊಳ್ಳಬೇಕೆಂಬ ಕನಸು ಯಾರಿಗಿರಲ್ಲ ಹೇಳಿ. ಆದ್ರೆ ಹಲವರಿಗೆ ಇದು ಕೈಗೆಟುಕದ ಕನಸು. ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡಲು ಆಗದಷ್ಟು ಹಣಕಾಸಿನ ಸಮಸ್ಯೆ ಮಧ್ಯದಲ್ಲೂ ಒಂದೊಳ್ಳೆ ಕಾರ್‌ ಖರೀದಿ ಮಾಡೋ ಆಸೆ ಇರುವವರಿಗೆ ಇಲ್ಲಿದೆ ಸುವರ್ಣಾವಕಾಶ

ಭಾರತದಲ್ಲಿ, ಹಲವು ಸರ್ಕಾರಿ ಇಲಾಖೆಗಳು ಮತ್ತು ಬ್ಯಾಂಕುಗಳು ಕಾಲಕಾಲಕ್ಕೆ ಹಳೆಯ ಕಾರುಗಳನ್ನು ಹರಾಜು ಮೂಲಕ ಮಾರಾಟ ಮಾಡುತ್ತವೆ. ಈ ಹರಾಜುಗಳಲ್ಲಿ ಕಾರುಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡುವ ಕಾರಣ, ಲಾಭ ಗಳಿಸುವುದು ಅಲ್ಲ, ಬದಲಾಗಿ ವಾಹನವನ್ನು ತ್ವರಿತವಾಗಿ ಮಾರಾಟ ಮಾಡುವುದೇ ಅವರ ಉದ್ದೇಶ. ಉದಾಹರಣೆಗೆ, ಸಾಲವನ್ನು ಮರುಪಾವತಿಸದಿದ್ದಾಗ ಬ್ಯಾಂಕುಗಳು ಆ ಕಾರನ್ನು ವಶಪಡಿಸಿಕೊಂಡು ಹರಾಜಿನಲ್ಲಿ ಮಾರುತ್ತವೆ. ಇದಲ್ಲದೆ, ಸರ್ಕಾರಿ ಇಲಾಖೆಗಳಿಂದ ತಮ್ಮ ಹಳೆಯ ಕಾರುಗಳನ್ನು ಬದಲಾಯಿಸಲು ಹರಾಜಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಎಲ್ಲಾ ಕಾರಣಗಳಿಂದ, ಹರಾಜು ಕಾರುಗಳ ಬೆಲೆಗಳು ಸಾಮಾನ್ಯ ಮಾರುಕಟ್ಟೆ ಬೆಲೆಗಿಂತ ಕಡಿಮೆ ಇರುತ್ತವೆ. ಇದರಿಂದ, ನೀವು ಹೆಚ್ಚು ಬಜೆಟ್ ಮಿತಿಯಲ್ಲಿಯೇ ಉತ್ತಮ ಕಾರು ಪಡೆಯಲು ಅವಕಾಶ ಸಿಗುತ್ತದೆ.

ಇ-ಹರಾಜು ಪೋರ್ಟಲ್‌ಗಳು, ಬ್ಯಾಂಕ್ ವೆಬ್‌ಸೈಟ್‌ಗಳು ಮತ್ತು MSTC (ಮೆಟಲ್ ಸ್ಕ್ರ್ಯಾಪ್ ಟ್ರೇಡ್ ಕಾರ್ಪೊರೇಷನ್) ನಂತಹ ಸರ್ಕಾರಿ ಸೈಟ್‌ಗಳಿಗೆ ಭೇಟಿ ನೀಡುವ ಮೂಲಕ, ಲಭ್ಯವಿರುವ ಕಾರುಗಳ ಪಟ್ಟಿಯನ್ನು ಸುಲಭವಾಗಿ ನೋಡಬಹುದು. ಈ ಕಾರಿನ ಜೊತೆಗೆ, ಅದರ ಮಾಹಿತಿ, ಸ್ಥಿತಿ ಮತ್ತು ಮೂಲ ಬೆಲೆಯನ್ನು ಸಹ ನೀಡಲಾಗಿರುತ್ತದೆ.

  1. ಮೊದಲು, ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಿ.
  2. ಸಣ್ಣ ಭದ್ರತಾ ಮೊತ್ತವನ್ನು ಠೇವಣಿ ಇಡಬೇಕು, ಇದನ್ನು EMD (Earnest Money Deposit) ಎಂದು ಕರೆಯಲಾಗುತ್ತದೆ.
  3. ನಿಮ್ಮ ಇಷ್ಟದ ಕಾರಿಗೆ ಬಿಡ್ ಹಾಕಿ. ಅತಿ ಹೆಚ್ಚು ಬಿಡ್ ಮಾಡಿದ ವ್ಯಕ್ತಿಗೆ ಕಾರು ಲಭಿಸುತ್ತದೆ.
  4. ಪಾವತಿ ಮುಗಿದ ನಂತರ, ಕಾರನ್ನು ನಿಮ್ಮ ಹೆಸರಿನಲ್ಲಿ ವರ್ಗಾಯಿಸಬಹುದು.

ಹರಾಜಿನಲ್ಲಿ ಲಭ್ಯವಿರುವ ಕಾರುಗಳನ್ನು  ಅವು ಇರುವ ಸ್ಥಿತಿಯಲ್ಲಿಯೇ ಖರೀದಿಸಬೇಕಾಗುತ್ತದೆ, ಹಾಗಾಗಿ ಖರೀದಿಗೂ ಮೊದಲು ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಓದುವುದು ಅಗತ್ಯ. ಸಾಧ್ಯವಾದರೆ ಕಾರನ್ನು ಮುಂಚಿತವಾಗಿ ನೋಡಿಕೊಳ್ಳುವುದು ಉತ್ತಮ. ದಾಖಲೆಗಳು ಮತ್ತು ನೋಂದಣಿಯನ್ನು ಪರಿಶೀಲಿಸುವುದು ಮುಖ್ಯ,