ಬ್ರಹ್ಮಾವರ: ಮಾಬುಕಳದಲ್ಲಿ ಟ್ರಕ್ ಢಿಕ್ಕಿಯಾಗಿ ಸ್ಕೂಟಿ ಸವಾರೆ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.
ಮೃತ ಮಹಿಳೆ ಉಪ್ಪಿನಕೋಟೆ ಸಾಲಿಕೇರಿ ನಿವಾಸಿ ನಿರ್ಮಲಾ (54).
ಇವರು ತನ್ನ ಪುತ್ರಿ ನಿರೀಕ್ಷಾ ಅವರೊಂದಿಗೆ ಸಾಲಿಗ್ರಾಮದ ಆಂಜನೇಯ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಮಾಬುಕಳ ಸೇತುವೆ ಬಳಿ ಬ್ರಹ್ಮಾವರದಿಂದ ಕೋಟ ಕಡೆ ಸಂಚರಿಸುತ್ತಿದ್ದ ತೆಲಂಗಾಣ ನೋಂದಣಿಯ ಟ್ರಕ್ ಢಿಕ್ಕಿ ಹೊಡೆಯಿತು. ಢಿಕ್ಕಿಯ ರಭಸಕ್ಕೆ ನಿರ್ಮಲಾ ಅವರು ಸ್ಥಳದಲ್ಲೇ ಮೃತಪಟ್ಟರು. ನಿರೀಕ್ಷಾ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

















