ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭ

ಬಂಟಕಲ್: ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ನಿರಾಮಯ ಕಾಲೇಜ್ ಆಫ್ ನರ್ಸಿಂಗ್ ಮತ್ತು ನಿರಾಮಯ ಕಾಲೇಜ್ ಆಫ್ ಹೆಲೈಡ್ ಹೆಲ್ತ್ ಸೈನ್ಸ್ ಸಂಸ್ಥೆಗಳು ಜಂಟಿಯಾಗಿ ಕಾಲೇಜು ವಾರ್ಷಿಕೋತ್ಸವವು ದಿನಾಂಕ 13 ಮಾರ್ಚ್ 2026 ರಂದು ವಿಜೃಂಭಣೆಯಿಂದ ಜರಗಿತು.

ಸಮಾರಂಭದಲ್ಲಿ ತೀರ್ಥಹಳ್ಳಿಯ ಬಾಳಗಾರು ಅಕ್ಷೋಭ್ಯ ಮಹಾಸಂಸ್ಥಾನ ಮಠದ ಕಿರಿಯ ಶ್ರೀಗಳಾದ ಶ್ರೀ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥ ಸ್ವಾಮೀಜಿಯವರ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀ ಮಧ್ವಚಾರ್ಯರು ಮತ್ತು ಶ್ರೀ ವಾದಿರಾಜರ ಸಾಧನೆಗಳು ಆಳವಾದ ವೈಜ್ಞಾನಿಕ ಬುದ್ಧಿವಂತಿಕೆಯನ್ನು ಹೊಂದಿದೆ ಎಂದು ತಿಳಿಸಿದರು.

ಇದು ಆಧ್ಯಾತ್ಮಿಕತೆ ಮತ್ತು ಆಧ್ಯಾತ್ಮಿಕತೆ ಮತ್ತು ಆಧುನಿಕ ವಿಜ್ಞಾನವು ಮೂಲಭೂತವಾಗಿ ಪರಸ್ಪರ ಸಂಬಂದವನ್ನು ಹೊಂದಿದೆ. ಭವಿಷ್ಯದ ತಾಂತ್ರಿಕ ಪ್ರಗತಿಗಾಗಿ ಸಾಂಪ್ರದಾಯಿಕ ಜ್ಞಾನವನ್ನು ಪರಿಹರಿಸಲು ವೈಜ್ಞಾನಿಕ ಸಮಸ್ಯೆಗಳಾಗಿ ಧ್ವನಿ – ಪ್ರೇರಿತ ಹವಾಮಾನ ಕುಶಲತೆ ಮತ್ತು ಲೋಹಶಾಸ್ತ್ರ ಸೇರಿದಂತೆ ಪ್ರಾಚೀನ ಸಾಧನೆಗಳನ್ನು ತನಿಖೆ ಮಾಡಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

ಉಡುಪಿ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಅವರು ತಮ್ಮ ಆಶೀರ್ವಚನದಲ್ಲಿ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ದೂರದೃಷ್ಟಿ ಮತ್ತು ಪೂರ್ವಭಾವಿ ಯೋಜನೆಯ ಮಹತ್ವವನ್ನು ಮಹಾಭಾರತದ ಕಥೆಯ ಉದಾಹರಣೆ ನೀಡುವ ಮೂಲಕ ವಿವರಿಸಿದರು. ಸೋಮಾರಿತನದಿಂದ ಕಾಲಹರಣ ಮಾಡುವವರಿಗಿಂತ ವ್ಯಕ್ತಿಗಳು ದಾರ್ಶನಿಕರಾಗಲು ಒತ್ತಾಯಿಸಿದರು. ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ಆಧುನಿಕ ಗುರಿಯೊಂದಿಗೆ ಯುವಪೀಳಿಗೆಯು ಮುಂದುವರಿಯಬೇಕು ಎಂದರು.

ಬೆಂಗಳೂರಿನ ಪ್ರತಿಷ್ಠಿತ ಕಂಪೆನಿ ಡಿ ಸಿ ಎಕ್ಸ್ ಇದರ ಮುಖ್ಯಸ್ಥರು ಮತ್ತು ನಿರ್ದೇಶಕರಾದ ಡಾ. ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ಸ್ವಯಂಚಾಲಿತ ವ್ಯವಸ್ಥೇಗಳನ್ನು ಒಳಗೊಂಡ ನವೀನ ಯೋಜನೆಗಳನ್ನು ಅಭಿವೃದ್ದಿಪಡಿಸಲು ಪ್ರೋತ್ಸಾಹಿಸಿದರು. ಅವರು ಕೈಗಾರಿಕಾ ಭೇಟಿ ಅವಕಾಶಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಉದ್ಯಮಶೀಲರಾಗಲು ಒತ್ತಾಯಿಸಿದರು. ಸಮಯ ಮತ್ತು ಶಿಸ್ತು ಯಶಸ್ಸಿನ ಕೀಲಿಕೈಗಳಾಗಿವೆ ಎಂದು ಸಲಹೆ ನೀಡಿದರು.

ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಎಸ್‌ಎಮ್‌ವಿಐಟಿಎಮ್ ಪ್ರಾಂಶುಪಾಲರಾದ ಡಾ.ನಾಗರಾಜ್ ಭಟ್, ನಿರಾಮಯ ಕಾಲೇಜ್ ಆಫ್ ಹೆಲೈಡ್ ಹೆಲ್ತ್ ಸೈನ್ಸ್ ಪ್ರಾಂಶುಪಾಲರಾದ ಶ್ರೀ ಶಿವಶಂಕರ್ ಪೈ ಇವರು ನಿರಾಮಯ ಕಾಲೇಜುಗಳ 2025-26ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.

ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ, ವಿದ್ಯಾಪ್ರತಿಷ್ಠ ವಿದ್ಯಾರ್ಥಿ ವೇತನ ಹಾಗೂ ಗೌತಮ ಫೌಂಡೇಶನ್‌ನಿಂದ ನೀಡಲ್ಪಟ್ಟ ವಿದ್ಯಾರ್ಥಿವೇತನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಅಂತಿಮ ವರ್ಷದ ಉತ್ತಮ ಸಾಧಕ ವಿದ್ಯಾರ್ಥಿಗಳಿಗೆ ಕೊಡುವ “ಶ್ರೀ ಮಧ್ವ ವಾದಿರಾಜ ಪ್ರಶಸ್ತಿ”ಯನ್ನು ವಿದ್ಯುನ್ಮಾಮ ಮತ್ತು ಸಂವಹನ ವಿಭಾಗದ ಅನ್ನಪೂರ್ಣ ಶೆಣೈ, ಗಣಕ ಯಂತ್ರ ವಿಭಾಗದ ನತಾಶ ಲೊಬೋ ಮತ್ತು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮತ್ತು ಮೆಶಿನ್ ಲರ್ನಿಂಗ್ ವಿಭಾಗದ ನಾಗೇಂದ್ರ ಪೈ, ಗಣಕ ಯಂತ್ರ ವಿಭಾಗದ ಸಾತ್ವಿಕ್ ಭಟ್ ಇವರಿಗೆ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ದ್ವಿತೀಯ ಮತ್ತು ತೃತೀಯ ವರ್ಷದ ಉತ್ತಮ ವಿದ್ಯಾರ್ಥಿಗಳಿಗೆ ಹಯವದನ ಪ್ರಶಸ್ತಿಯನ್ನು ನೀಡಲಾಯಿತು. ಡಾಕ್ಟರೇಟ್ ಪದವಿ ಪಡೆದುಕೊಂಡ ಅಧ್ಯಾಪಕರನ್ನು ಗೌರವಿಸಲಾಯಿತು.

ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ ಉಪಾಧ್ಯಕ್ಷರಾದ ಶ್ರೀ ಶ್ರೀನಿವಾಸ ತಂತ್ರಿ, ಸೋದೆ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ
ಡಾ. ರಾಧಾಕೃಷ್ಣ ಎಸ್ ಐತಾಳ್, ಸಂಸ್ಥೆಯ ಟ್ರಸ್ಟ್ ಮತ್ತು ಆಡಳಿತ ಸಲಹಾ ಮಂಡಳಿಯ ಸದಸ್ಯರಾದ ಶ್ರೀ ಎಚ್ ವಿ ಗೌತಮ, ಶ್ರೀ ಸುಂದರ್ ಮಡಾಕ್ಷಿರ, ಶ್ರೀ ಹರೀಶ್ ಬೆಳ್ಮಣ್ ಮತ್ತು ಶ್ರೀ ಶ್ಯಾಮ್ ಸುಂದರ್, ಸಂಸ್ಥೆಯ ಡೀನ್‌ಗಳಾದ ಡಾ. ಸುದರ್ಶನ್ ರಾವ್ ಮತ್ತು
ಡಾ. ಸಚಿನ್ ಭಟ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ಡಾ. ದೀಪಿಕಾ ಬಿ ವಿ, ವಿದ್ಯಾರ್ಥಿ ಘಟಕದ ವಿದ್ಯಾರ್ಥಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರಾಮಯ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲರಾದ ಶ್ರೀಮತಿ ರೋಶನಿ ರೊಡ್ರಿಗಸ್ ಮುಖ್ಯ ಅತಿಥಿಗಳನ್ನು ಮತ್ತು ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಸಚಿನ್ ಪ್ರಭು ಇವರು ಬಾಳಗಾರು ಅಕ್ಷೋಭ್ಯ ಮಹಾಸಂಸ್ಥಾನ ಮಠದ ಶ್ರೀ ಪಾದರನ್ನು ಪರಿಚಯಿಸಿದರು.

ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ. ರಾಜ ಯತೀಶ್ ಯಾದವ್, ಶೈಕ್ಷಣಿಕ ಡೀನ್ ಡಾ. ಸುದರ್ಶನ್ ರಾವ್ ಮತ್ತು ರಿಸರ್ಚ್ ಡೀನ್ ಡಾ. ಸಚಿನ್ ಭಟ್ ವಿದ್ಯಾರ್ಥಿ ವೇತನವನ್ನು ಪಡೆದವರ ವಿವರವನ್ನು ನೀಡಿದರು. ಶರಣ್ಯ ತಂತ್ರಿ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ ಶ್ರೀ ಸುಧೀರ್ ಮತ್ತು ಪ್ರಾಧ್ಯಾಪಕಿಯಾದ ಶ್ರೀಮತಿ ಕಾವ್ಯಲಕ್ಷ್ಮಿ ನಿರೂಪಿಸಿದರು.