ಶ್ರೀ ಪೆರ್ಡೂರು ಅನಂತಪದ್ಮನಾಭ ಕ್ಷೇತ್ರದಲ್ಲಿ ಮಾ.16 ರಂದು ಶ್ರೀಮನ್ಮಹಾರಥೋತ್ಸವ: ಕದಳೀಪ್ರಿಯನ ನಾಡಿನಲ್ಲಿ ಸಂಭ್ರಮ, ಸಡಗರ

ಉಡುಪಿ: ಶ್ರೀ ಪೆರ್ಡೂರು ಅನಂತಪದ್ಮನಾಭ ಕ್ಷೇತ್ರದಲ್ಲಿ
ವಾರ್ಷಿಕ ಜಾತ್ರಾಮಹೋತ್ಸವಗಳು ಶುರುವಾಗಿದ್ದು,
ಮಾ. 13 ರಂದು ಧ್ವಜಾರೋಹಣ, ಆಗ್ನಿಜನನ, ಪ್ರಧಾನಹೋಮ, ಕಲಶಾಭಿಷೇಕ, ಮಧ್ಯಾಹ್ನ :ಮಹಾಪೂಜೆ, ಅನ್ನಸಂತರ್ಪಣೆ,ರಾತ್ರಿ : ದೀವಟಿಗೆ ಸೇವೆ, ಉತ್ಸವ ಬಲಿ, ಗರುಡವಾಹನ, ತೆಪ್ಪೋತ್ಸವ, ರಥೋತ್ಸವ, ಓಲಗಮಂಟಪದಲ್ಲಿ ಪೂಜೆ, ಅಷ್ಟಾವಧಾನ ಸೇವೆಗಳು, ಮಹಾಪೂಜೆ, ನಿತ್ಯಬಲಿ, ಸವಾರಿ ಬಲಿ, ಕಟ್ಟೆಪೂಜೆ, ಕಂಚಿಲ ಸೇವೆ, ದೊಡ್ಡರಂಗಪೂಜೆ, ರಂಗಪೂಜೆ ಬಲಿ, ಕೆರೆದೀಪ, ಚಂದ್ರಮಂಡಲ ರಥ, ಉಶಃಕಾಲ ಪೂಜೆ, ಕಂಚಿಲ ಪ್ರಸಾದ ವಿತರಣೆ ನಡೆಯಿತು.

ಶ್ರೀ ಕ್ಷೇತ್ರದಲ್ಲಿ 14 ರಂದು ಮಧ್ಯಾಹ್ನ ಪ್ರಧಾನಹೋಮ, ಕಲಶಾಭಿಷೇಕ, ಮಹಾಪೂಜೆ ಅನ್ನಸಂತರ್ಪಣೆ, ರಾತ್ರಿ : ದೀವಟಿಗೆ ಸೇವೆ, ಉತ್ಸವ ಬಲಿ, ಗರುಡವಾಹನ, ತೆಪ್ಪೋತ್ಸವ, ರಥೋತ್ಸವ, ಓಲಗಮಂಟಪದಲ್ಲಿ ಪೂಜೆ, ಅಷ್ಟಾವಧಾನ ಸೇವೆಗಳು, ಮಹಾಪೂಜೆ, ನಿತ್ಯಬಲಿ, ಸವಾರಿ ಬಲಿ, ಕಟ್ಟೆಪೂಜೆ, ಕಂಚಿಲ ಸೇವೆ, ದೊಡ್ಡರಂಗಪೂಜೆ, ರಂಗಪೂಜೆ ಬಲಿ, ಕೆರೆದೀಪ, ಚಂದ್ರಮಂಡಲ ರಥ, ಉಶಃಕಾಲ ಪೂಜೆ, ಕಂಚಿಲ ಪ್ರಸಾದ ವಿತರಣೆ.

ಮಾ.15 ರಂದು ಬೆಳಗ್ಗೆ: ಪ್ರಧಾನಹೋಮ, ಕಲಶಾಭಿಷೇಕ, ಮಧ್ಯಾಹ್ನ:ಮಹಾಪೂಜೆ, ಉಪಹಾರ (ಏಕಾದಶಿ ಪ್ರಯುಕ್ತ) ರಾತ್ರಿ : ದೀವಟಿಗೆ ಸೇವೆ, ಉತ್ಸವ ಬಲಿ, ವಸಂತೋತ್ಸವ, ಬೆಳ್ಳಪಾಲಕಿ, ಚಂದ್ರಮಂಡಲ ರಥ, ಇಡಿಗಾಯಿ, ಓಲಗಮಂಟಪದಲ್ಲಿ ಪೂಜೆ ಅಷ್ಟಾವಧಾನ ಸೇವೆಗಳು, ಮಹಾಪೂಜೆ, ನಿತ್ಯಬಲಿ, ಸವಾರಿ ಬಲಿ, ಕಟ್ಟೆ ಪೂಜೆ, ಭುಜಂಗಬಲಿ.

ಮಾ.16 ರಂದು ಶ್ರೀಮನ್ಮಹಾರಥೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು,

ಮಾ. 17 ರಂದು ಆರಾಟೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಾ.19 ರಂದು ಬ್ರಹ್ಮಕುಂಭಾಭಿಷೇಕ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಲಿದೆ.