ಉಡುಪಿ:ಐವರು ಸಾಧಕರಿಗೆ ಜಿಲ್ಲಾ ರೆಡ್‌ಕ್ರಾಸ್ ಗೌರವ

ಉಡುಪಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಸಹಯೋಗದಲ್ಲಿ ಉಡುಪಿ ಜಿಲ್ಲಾ ಲೇಖಕಿಯರ ವಾಚಕಿಯರ ಸಂಘದ ಆಶ್ರಯದಲ್ಲಿ ಮಾರ್ಚ್ 14 ರಂದು ರೆಡ್‌ಕ್ರಾಸ್ ಭವನದಲ್ಲಿ ನಡೆಯಲಿರುವ ಅಂತರಾಷ್ಟಿಯ ಮಹಿಳಾ ದಿನಾಚರಣೆಯ ಮಹಿಳಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ರೆಡ್‌ಕ್ರಾಸ್ ಘಟಕವು ಉಡುಪಿ ಜಿಲ್ಲೆಯ ಐದು ಮಂದಿ ಸಾಧಕಿಯರನ್ನು ಗೌರವಿಸಲಿದೆ.

ಸಾರ್ವಜನಿಕ ಆಡಳಿತ ಸೇವೆಗಾಗಿ ಶ್ಯಾಮಲಾ ಸಿ.ಕೆ, ಹಿರಿಯ ಲೇಖಕಿ ಮತ್ತು ಭಾ಼ಷಾಂತರ ತಜ್ಞೆ ಡಾ. ಪಾರ್ವತಿ ಜಿ. ಐತಾಳ್, ಕಲೆ
ಮತ್ತು ಸಮಾಜಸೇವೆಗಾಗಿ ಕುಸುಮ ಕಾಮತ್ ಕರ್ವಾಲು, ಶೈಕ್ಷಣಿಕ ಸೇವೆಗಾಗಿ ಪ್ರೊ. ಸುಜಯ ಕೆ. ಎಸ್, ಹಿಂದಿ, ಸಾಹಿತ್ಯ,
ಎನ್.ಎಸ್.ಎಸ್. ಎನ್.ಸಿ.ಸಿ ಮತ್ತು ರೆಡ್‌ಕ್ರಾಸ್ ಸೇವೆಗಾಗಿ ಕ್ಯಾಪ್ಟನ್ ಡಾ. ಸುಕನ್ಯ ಮಾರ್ಟಿಸ್ ಇವರನ್ನು ಅಂತರಾಷ್ಟಿçÃಯ
ಮಹಿಳಾ ದಿನಾಚರಣೆಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ಮತ್ತು ರಂಗನಟಿ ಗೀತಾ ಸುರತ್ಕಲ್‌ರವರು ಸನ್ಮಾನಿಸಿ ಗೌರವಿಸಲಿದ್ದಾರೆ ಎಂದು ರೆಡ್ ಕ್ರಾಸ್ ಪ್ರಕಟಣೆ ತಿಳಿಸಿದೆ.