ಉಡುಪಿ:ಡಿಪ್ಲೋಮಾ ಪ್ರವೇಶಾತಿ : ಅರ್ಜಿ ಆಹ್ವಾನ

ಉಡುಪಿ:ಮೈಸೂರಿನ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರದಲ್ಲಿ 2026-27 ನೇ ಸಾಲಿನ ಉದ್ಯೋಗಾಧಾರಿತ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (ಡಿ.ಪಿ.ಟಿ) ಹಾಗೂ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (ಡಿ.ಪಿ.ಎಂ.ಟಿ) – 3 ವರ್ಷಗಳ ಅವಧಿಯ ಕೋರ್ಸ್ಗಳ ಪ್ರವೇಶಾತಿಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಹಾಗೂ ಹಾಜರಾಗುವವರು ಆನ್‌ಲೈನ್ https://cipet26.onlineregistrationform.org/CIPET/ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಸಿಪೆಟ್ […]

ಪಡೀಲ್: ಬೈಕ್ ಗೆ ಗೂಡ್ಸ್ ಟೆಂಪೋ ಡಿಕ್ಕಿ- ಯುವಕ ಮೃತ್ಯು

ಮಂಗಳೂರು: ಗೂಡ್ಸ್ ಟೆಂಪೋವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಮಂಗಳೂರಿನ ಪಡೀಲ್ ಸಮೀಪ ಸಂಭವಿಸಿದೆ. ಸಚ್ಚೇರಿಪೇಟೆಯ ಕುದ್ರೋಟ್ ನಿವಾಸಿ ಸಜೇಶ್ ಪೂಜಾರಿ ಮೃತದುರ್ದೈವಿ. ಇವರು ಮಂಗಳೂರಿನ ಟಾಟಾ ಶೋರೂಮ್ ನಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮಾ.9ರಂದು ತನ್ನ ಬೈಕ್ ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಪಡೀಲ್ ಸಮೀಪ ತಿರುವಿನಲ್ಲಿ ಟೆಂಪೋ ಡಿಕ್ಕಿ ಹೊಡೆದಿದ್ದು, ಬೈಕ್ ಸಮೇತ ರಸ್ತೆಗೆ ಬಿದ್ದ ಸಜೇಶ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು […]

ಪ್ರತಿಷ್ಠಿತ ಹೋಟೆಲ್’ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ: 45 ವರ್ಷಗಳ ಪಾರಂಪರ್ಯ ಹೊಂದಿರುವ ಖ್ಯಾತ ಆತಿಥ್ಯ ಬ್ರ್ಯಾಂಡ್ ಹೈದರಾಬಾದ್‌ನಲ್ಲಿ ಹೊಸ ಔಟ್‌ಲೆಟ್ ಆರಂಭಿಸುತ್ತಿದ್ದು, ವಿವಿಧ ಹುದ್ದೆಗಳಿಗೆ ಕರಾವಳಿ ಭಾಗದ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಲಭ್ಯವಿರುವ ಹುದ್ದೆಗಳು: 🔹ಮ್ಯಾನೇಜರ್🔹CDP – ಸೌತ್ ಇಂಡಿಯನ್ ಕ್ಯುಸಿನ್,🔹ಕಮೀ – ಸೌತ್ ಇಂಡಿಯನ್ ಜ್ಯೂಸ್ ಕೌಂಟರ್ ಸ್ಟಾಫ್🔹ಚಾಟ್ ಸ್ಟಾಫ್🔹ಡೆಸೆರ್ಟ್ ಸ್ಟಾಫ್🔹ಕ್ಯಾಪ್ಟನ್ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9916737966

ಉಡುಪಿ:ಐವರು ಸಾಧಕರಿಗೆ ಜಿಲ್ಲಾ ರೆಡ್‌ಕ್ರಾಸ್ ಗೌರವ

ಉಡುಪಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಸಹಯೋಗದಲ್ಲಿ ಉಡುಪಿ ಜಿಲ್ಲಾ ಲೇಖಕಿಯರ ವಾಚಕಿಯರ ಸಂಘದ ಆಶ್ರಯದಲ್ಲಿ ಮಾರ್ಚ್ 14 ರಂದು ರೆಡ್‌ಕ್ರಾಸ್ ಭವನದಲ್ಲಿ ನಡೆಯಲಿರುವ ಅಂತರಾಷ್ಟಿಯ ಮಹಿಳಾ ದಿನಾಚರಣೆಯ ಮಹಿಳಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ರೆಡ್‌ಕ್ರಾಸ್ ಘಟಕವು ಉಡುಪಿ ಜಿಲ್ಲೆಯ ಐದು ಮಂದಿ ಸಾಧಕಿಯರನ್ನು ಗೌರವಿಸಲಿದೆ. ಸಾರ್ವಜನಿಕ ಆಡಳಿತ ಸೇವೆಗಾಗಿ ಶ್ಯಾಮಲಾ ಸಿ.ಕೆ, ಹಿರಿಯ ಲೇಖಕಿ ಮತ್ತು ಭಾ಼ಷಾಂತರ ತಜ್ಞೆ ಡಾ. ಪಾರ್ವತಿ […]

ಉಡುಪಿ:ರೈತರ ಮಕ್ಕಳಿಗೆ ತೊಟಗಾರಿಕೆ ತರಬೇತಿ : ಅರ್ಜಿ ಆಹ್ವಾನ

ಉಡುಪಿ: ತೋಟಗಾರಿಕೆ ಇಲಾಖೆ ವತಿಯಿಂದ ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಜಿಲ್ಲೆಗೆ 07 ಅಭ್ಯರ್ಥಿಗಳ ಗುರಿ ನಿಗಧಿಪಡಿಸಿದ್ದು, ಕನಿಷ್ಟ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ, ಕೃಷಿ ಜಮೀನು ಹೊಂದಿರುವ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 23 ರ ಪೂರ್ವಾಹ್ನ ತೋಟಗಾರಿಕೆ ಜಂಟಿ ನಿರ್ದೇಶಕರು (ಜಿಪಂ), ಉಡುಪಿ ರವರ ಕಛೇರಿಯಲ್ಲಿ ಸಂದರ್ಶನ ನಡೆಯಲಿದ್ದು,ಏ. 27 ರಂದು ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು. ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ […]