ತ್ರಿಶಾ ಕ್ಲಾಸಸ್: ಸಿ ಎ ಫೈನಲ್ ಪರೀಕ್ಷೆಯಲ್ಲಿ ಕಲ್ಪಿತಾ ಎನ್ ಎಸ್ ಉತ್ತೀರ್ಣ

ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಜನವರಿ 2026 ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಕಲ್ಪಿತಾ ಎನ್ ಎಸ್ ಅವರು ಉತ್ತೀರ್ಣರಾಗಿದ್ದಾರೆ.

ಇವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಟಿ. ಬಿ. ನಾರಾಯಣ್ ಹಾಗೂ ಕೆ. ಶೀಲಾವತಿ ದಂಪತಿಗಳ ಪುತ್ರಿಯಾಗಿದ್ದು ತಮ್ಮ ಆರ್ಟಿಕಲ್ ಶಿಪ್ ನ್ನು ಗಣೇಶ್ ಮತ್ತು ಸುಧೀರ್ ಚಾರ್ಟಡ್ ಅಕೌಂಟೆಂಟ್ಸ್ ಮಂಗಳೂರಿನಲ್ಲಿ ಪೂರೈಸಿಕೊಂಡಿದ್ದಾರೆ. ಸಿಎ ಇಂಟರ್ಮೀಡಿಯಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಹಾಗೂ ಪದವಿ ವಿದ್ಯಾಭ್ಯಾಸವನ್ನು ಮಂಗಳೂರಿನ ತ್ರಿಶಾ ಸಂಧ್ಯಾ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ.