ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2025-26ನೇ ಶೈಕ್ಷಣಿಕ ವರ್ಷದ ವಾರ್ಷಿಕ ಸಮಾರಂಭ

ಉಡುಪಿ, ಬಂಟಕಲ್: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 2025-26ನೇ ಸಾಲಿನ ವಾರ್ಷಿಕ ಸಮಾರಂಭಗಳು ಮಾರ್ಚ್ 11 ರಿಂದ 14ರವರೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ.

“ವರ್ಣೋತ್ಸವ- 2026” ಎಂಬ ರಾಷ್ಟ್ರೀಯ ಮಟ್ಟದ ಅಂತರ ಕಾಲೇಜು ತಾಂತ್ರಿಕ- ಸಾಂಸ್ಕೃತಿಕ ಹಬ್ಬವನ್ನು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ದಿನಾಂಕ 11 ಮತ್ತು 12 ಮಾರ್ಚ್ 2026 ರಂದು ಆಯೋಜಿಸಲಾಗಿದೆ. ಈ ಹಬ್ಬದಲ್ಲಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಫರ್ಧೆಗಳನ್ನು ಆಯೋಜಿಸಲಾಗಿದ್ದು, ನಂತರ ಮಾರ್ಚ್ 13 ರಂದು ವಾರ್ಷಿಕೋತ್ಸವ ಹಾಗೂ ಮಾರ್ಚ್ 14 ರಂದು ಹಳೆ ವಿದ್ಯಾರ್ಥಿಗಳ ಸಭೆಯನ್ನು ಒಳಗೊಂಡಂತೆ ನಾಲ್ಕು ದಿನಗಳ ಕಾರ್ಯಕ್ರಮಗಳು ನಡೆಯಲಿದೆ.

ಸಾಂಸ್ಕೃತಿಕ ಹಬ್ಬವನ್ನು ಸಾಂಸ್ಕೃತಿಕ ಕಾರ್ನಿವಾಲ್, ತಾಂತ್ರಿಕ ಕಾರ್ನಿವಾಲ್ ಮತ್ತು ವ್ಯವಹಾರ ಕಾರ್ನಿವಾಲ್ ಎಂಬ ಮೂರು ಪ್ರಮುಖ ವಿಭಾಗಗಳ ಅಡಿಯಲ್ಲಿ ರೂಪಿಸಲಾಗಿದೆ.

ಸಾಂಸ್ಕೃತಿಕ ಕಾರ್ನಿವಲ್‌ನಲ್ಲಿ ಭಾವ ತರಂಗ, ಜನಪದ ನಾದ, ತಕ ಧಿಮಿ ತಾ, ಗ್ರೂವ್ ಗಾಲಾ, ಸ್ಪೀಚ್ ಆಫ್ ಸ್ಮೆಲ್ಸ್, ಹೂ ಆ್ಯಮ್ ಐ, ಹ್ಯಾಂಡ್ಸ್ ಆಫ್ ಆರ್ಟ್, ಅನಿಮೆ ಅರೇನ, ಮ್ಯೂಸಿಕಲ್ ಮ್ಯಾರಥಾನ್, ನೇಚರ್ಸ್ ಪ್ಯಾಲೆಟ್, ಕಲಾ ಸಂಗಮ, ಸೈಲೆಂಟ್ ಸಿಂಫನಿ, ಬಣ್ಣದ ಪ್ರಪಂಚ, ಆರ್ಟ್ ಆಫ್ ಟ್ಯೂನ್, ಸ್ಕೆಚ್ ಕ್ರಾನಿಕಲ್ಸ್, ಶಟ್ಟರ್‌ರ್ವಸ್ ಮತ್ತು ಸಿನಿಕ್ಯಾಪ್ಚರ್ ಮುಂತಾದ ಸ್ಫರ್ಧೆಗಳು ನಡೆಯಲಿದೆ.

ತಾಂತ್ರಿಕ ಕಾರ್ನಿವಲ್‌ನಲ್ಲಿ ಆಲ್ಗೋರಿದಮ್ ರೌಲಟ್, ಪ್ರಾಂಪ್ಟ್ ಟು ಪ್ರಾಡಕ್ಟ್, ಎಲೆಕ್ಟ್ರಾ ಡಿಟೆಕ್ವಿವ್ಸ್ ಫಾಸ್‌ಟೆಸ್ಟ್ ಲೈನ್ ಫಾಲೋವರ್, ಕ್ಲಾಶ್ ಆಫ್ ರೇಡಿಯಂಟ್ಸ್, ಹ್ಯಾಕ್‌ಹಂಟ್, ಪಿಚ್‌ಥಾನ್, ರೈಟ್ ಬ್ರದರ್ಸ್, ರೋಬೋ ಸಾಕರ್ ಸ್ಫರ್ಧೆಯನ್ನು ಆಯೋಜಿಸಲಾಗಿದೆ.

ವ್ಯವಹಾರ ಕಾರ್ನಿವಲ್‌ನಲ್ಲಿ ಮನಿ ಮ್ಯಾಟರ್ಸ್, ವಿಝನರಿ ವೆಂಚರ್ಸ್ ಮತ್ತು ಅಲ್ಟಿಮೇಟ್ ಭಿಝ್ ಟೀಮ್ ಸ್ಫರ್ಧೆಗಳು ನಡೆಯಲಿದೆ.

“ವರ್ಣೋತ್ಸವ 2026” ಇದರ ಉದ್ಘಾಟನಾ ಸಮಾರಂಭವು ಬುಧವಾರ, ಮಾರ್ಚ್ 11ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದ್ದು ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಇವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಶ್ರೀ ದೀಪಕ್ ನಾಯಕ್, ಲೀಡ್ ಇಂಜಿನಿಯರ್, ಕ್ಲೀಯರ್ ಫೀಡ್, ಬೆಂಗಳೂರು ಇವರು ಮುಖ್ಯ ಅತಿಥಿಗಳಾಗಿ ಮತ್ತು ಶ್ರೀಮತಿ ಸ್ನೇಹಲ್ ವಿ ರಾವ್, ಕ್ವಾಂಟಿಟಿ ಸರ್ವೇಯರ್ ಸೈಮನ್ಸ್ ಆ್ಯಂಡ್ ಅಸೋಸಿಯೆಟ್ಸ್, ಉಡುಪಿ ಇವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ರಸಮಂಜರಿ ನಡೆಯಲಿದೆ.

ಮಾರ್ಚ್ 12 ಗುರುವಾರ 2026ರಂದು ಮಧ್ಯಾಹ್ನ 3.00ಕ್ಕೆ “ವರ್ಣೋತ್ಸವ 2026” ಇದರ ಸಮಾರೋಪ ಸಮಾರಂಭ ನಡೆಯಲಿದ್ದು ಈ ಸಂದರ್ಭದಲ್ಲಿ ವಿವಿಧ ಸ್ಫರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಅದೇ ದಿನ ಸಂಜೆ ಸಂಸ್ಥೆಯ ವಿದ್ಯಾರ್ಥಿಗಳ ಯಕ್ಷಸಿಂಚನ ತಂಡದಿಂದ ಯಕ್ಷಗಾನ ನಡೆಯಲಿದೆ.

13 ಮಾರ್ಚ್ 2026 ರಂದು ವಾರ್ಷಿಕೋತ್ಸವ ಸಮಾರಂಭವು ನಡೆಯಲಿದ್ದು ತೀರ್ಥಹಳ್ಳಿ ಬಾಳಗಾರು ಅಕ್ಷೊಭ್ಯ ತೀರ್ಥ ಸಂಸ್ಥಾನದ ಕಿರಿಯ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಈ ಕಾರ್ಯಕ್ರಮವು ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಡಿಸಿಎಕ್ಸ್ ಸಿಸ್ಟಮ್ ಲಿಮಿಟೆಡ್ ಬೆಂಗಳೂರು ಇದರ ಸ್ಥಾಪಕ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಚ್. ಎಸ್. ರಾಘವೇಂದ್ರ ರಾವ್ ಭಾಗವಹಿಸಲಿದ್ದಾರೆ.

14 ಮಾರ್ಚ್ 2026 ರಂದು ಹಳೆ ವಿದ್ಯಾರ್ಥಿಗಳ ಸಮಾವೇಶ, ಅಟೋ ಎಕ್ಸೊ – “ಮೋಟೋ ಮಾನಿಯಾ” ಹಾಗೂ ಪ್ರತಿಷ್ಠಿತ ಮ್ಯೂಸಿಕಲ್ ಬ್ಯಾಂಡ್ ಸಂಸ್ಥೆಯಾದ “ತರಾನಾ” ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಲಿದೆ.