ಉಡುಪಿ, ಬಂಟಕಲ್: ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಭುಷಣ್ ಪೂಜಾರಿ, ಶ್ರೀ ಕಿರಣ್ ಭಟ್, ಅಮೃತ, ವಿಶೃತ, ಶ್ರೇಯಸ್ ಆಚಾರ್ಯ ಮತ್ತು ಪ್ರಜ್ವಲ್ ಗುಲ್ವಾಡಿ ಇವರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಮಂಡ್ಯ ಇಲ್ಲಿ ದಿನಾಂಕ 19 ಮತ್ತು 20 ಫೆಬ್ರವರಿ 2026 ರಂದು ನಡೆದ “ವಿಜ್ಞಾತಂ ಉತ್ಸವ 2026” ರಾಷ್ಟ್ರೀಯ ಮಟ್ಟದ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಬಹುಮಾನವನ್ನು ಪಡೆದಿರುತ್ತಾರೆ.
ಈ ಯೋಜನೆಯನ್ನು ಸೃಜನಶೀಲತೆ, ನಾವೀನ್ಯತೆ, ವೈಜ್ಞಾನಿಕ ತತ್ವಗಳು ತಾಂತ್ರಿಕ ಕೌಶಲ್ಯಗಳು ಮತ್ತು ಆರ್ಥಿಕ ಕಾರ್ಯಸಾಧ್ಯತೆ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಯಿತು.
ವಿದ್ಯಾರ್ಥಿಗಳು “ಆಹಾರ ಭದ್ರತೆಗಾಗಿ ಕೃಷಿಯಲ್ಲಿ ಎಐ ಮತ್ತು ಐಒಟಿ” ಎಂಬ ವಿಷಯದಡಿಯಲ್ಲಿ ಯೋಜನೆಯನ್ನು ಪ್ರಸ್ತುತ ಪಡಿಸಿದರು. ಈ ಯೋಜನೆಯು ಕೃಷಿಯಲ್ಲಿ ತಾಂತ್ರಿಕ ವಿಧಾನವನ್ನು ಬಳಸಿಕೊಂಡು ಬೆಳೆಯ ಇಳುವರಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು ಸ್ಮಾರ್ಟ್ ಕೃಷಿ ತಂತ್ರಜ್ಞಾನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಈ ಯೋಜನೆಯು ಮಣ್ಣಿನ ಸಂವೇದನೆಯ ಮೂಲಕ ಸಂಗ್ರಹಿಸಲಾದ ಮಾಹಿತಿಯನ್ನು ಎಐ ಆಧಾರಿತ ವಿಶ್ಲೇಷಣೆ ಮತ್ತು ಐಒಟಿ ತಂತ್ರಜ್ಞಾನದಿಂದ ಸಂಸ್ಕರಿಸಿ ರೈತರಿಗೆ ಸ್ವಯಂಚಾಲಿತ ಶಿಫಾರಸುಗಳನ್ನು ನೀಡುವ ವ್ಯವಸ್ಥೆಯನ್ನು ಒಳಗೊಂಡಿದೆ. ಇದರಿಂದ ಬೆಳೆ ಉತ್ಪಾದನೆ ಹೆಚ್ಚಿಸಿ, ಶಾಶ್ವತ ಕೃಷಿಯನ್ನು ಉತ್ತೇಜಿಸಿಸುವ ಗುರಿಯನ್ನು ಹೊಂದಿದೆ.















