ಉಡುಪಿ: ಕಲ್ಸಂಕದ ಮಾಲ್ ಒಂದರಲ್ಲಿ ಸ್ವಚ್ಛತಾ ಕೆಲಸ ಮಾಡುತಿದ್ದ ನಿಟ್ಟೂರಿನ ದೀಪಾ (34) ಎಂಬವರು ಮಾ.3ರಂದು ಕೆಲಸಕ್ಕೆಂದು ಹೋದವರು ಸಂಜೆ ಮನೆಗೆ ಬರದೇ ನಾಪತ್ತೆಯಾಗಿದ್ದಾರೆ.
ಬಾಗಲಕೋಟೆ ಮೂಲದ ದೀಪಾ ಮೊಬೈಲ್‌ನ್ನು ಮನೆಯಲ್ಲೇ ಬಿಟ್ಟು ಹೋಗಿದ್ದು, ಕೆಲಸಕ್ಕೂ ಹೋಗದೆ ಊರಿಗೂ ಹೋಗದೇ ನಾಪತ್ತೆಯಾಗಿರುವುದಾಗಿ ಪತಿ ನಾಗಯ್ಯ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

















