ಕರಾವಳಿಯ ವೇಗದ ಸುದ್ದಿ ಜಾಲತಾಣ ಉಡುಪಿXPRESS.Com ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ ವಿಶೇಷ ಫೋಟೋ ಸ್ಪರ್ಧೆ “ಅಮ್ಮ with ಕಂದಮ್ಮ” ಇದರ ಫಲಿತಾಂಶ ಹೊರಬಿದ್ದಿದ್ದು ಒಟ್ಟು ಆರು ಮಂದಿ ಅಮ್ಮ ಕಂದಮ್ಮರಿಗೆ ಬಹುಮಾನ ಲಭಿಸಿದೆ.
ಉಡುಪಿಯ ವಿದ್ಯಾ ಕಿರಣ್-ರಿಷಿಕಾ ಫೇಸ್ಬುಕ್ ನಲ್ಲಿ ಅತೀ ಹೆಚ್ಚು ಲೈಕ್ ಪಡೆದು ಮೊದಲ ಬಹುಮಾನ, ಪುತ್ತೂರಿನ ದೀಪ್ತಿ-ಅರ್ಯಹೀ ಮಂಜುನಾಥ್ ದ್ವಿತೀಯ ಬಹುಮಾನ, ಉಜಿರೆಯ ಕವನಶ್ರೀ-ತ್ವಿಶಾ ತೃತೀಯ ಬಹುಮಾನ ಪಡೆದಿದ್ದಾರೆ.
ತೀರ್ಪುಗಾರರು ಆಯ್ಕೆ ಮಾಡಿದ ಫೋಟೋಗಳಲ್ಲಿ ಸುಶ್ಮಿತಾ ಅನೀಶ್-ಶಾರ್ವಿ ಜೈನ್, ಬೆಂಗಳೂರು ಮೊದಲ ಬಹುಮಾನ, ಸುಶ್ಮಿತಾ ಮಯ್ಯ-ಸುಕೃತ್ ಮಯ್ಯ ಉಡುಪಿ ದ್ವಿತೀಯ, ಸಿಂಗಾವುರದ ಸುಕೃತ್ ರಾವ್-ಅಧಿಕ್ಷಿತ್ ತೃತೀಯ ಬಹುಮಾನ ಪಡೆದಿದ್ದಾರೆ.
ಕುಂದಾಪುರದಿಂದ ಸಿಂಗಾಪುರದವರೆಗೂ:
ಉಡುಪಿXPRESS, ನ “ಅಮ್ಮ with ಕಂದಮ್ಮ ಫೋಟೋ ಸ್ಪರ್ಧೆಗೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ನಮ್ಮ ಫೇಸ್ಬುಕ್ ಪೇಜ್ ನಲ್ಲಿ 250 ಕ್ಕೂ ಹೆಚ್ಚಿನ ಅಮ್ಮ-ಮಗುವಿನ ಫೋಟೋಗಳು ಅಪ್ ಲೋಡ್ ಆಗಿದ್ದು ಒಂದಕ್ಕಿಂತಲೂ ಒಂದು ಫೋಟೋಗಳು ಕಲರ್ ಫುಲ್ಲಾಗಿತ್ತು. ಕೆಲವು ಫೋಟೋಗಳಂತೂ ಶೇರ್ ಮಾಡಿದ ಕೆಲವೇ ಕ್ಷಣಗಳಲ್ಲಿ ಭರ್ಜರಿ ಲೈಕ್ ಪಡೆಯಲು ಶುರುಮಾಡಿತು. ಬರೀ ಕರಾವಳಿ ಕಡೆಗಳಿಂದ ಮಾತ್ರ ಫೋಟೋಗಳು ಬರಲಿಲ್ಲ, ಮುಂಬೈ, ಆಂಧ್ರಪ್ರದೇಶ, ಕೊಚ್ಚಿಗಳಿಂದಲೂ ರಾಶಿ ರಾಶಿ ಎಂಟ್ರಿಗಳು ಬಂದಿದೆ. ಸಿಂಗಾಪುರ, ದುಬೈ, ಕೆನಡಾಗಳಂತಹ ಹೊರದೇಶಗಳಿಂದಲೂ ಅಮ್ಮ-ಮಗುವಿನ ಫೋಟೋಗಳು ಉಡುಪಿXPRESS ಸ್ಪರ್ಧೆಗೆ ಎಂಟ್ರಿ ಕೊಟ್ಟಿದ್ದು ನಮ್ಮ ಲವಲವಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಅತೀ ಹೆಚ್ಚು ಲೈಕ್ ಪಡೆದ ಮೊದಲ 3 ಫೋಟೋಗಳಿಗೆ ಲೈಕ್ ಗಳ ನಿಯಮಾನುಸಾರ ಬಹುಮಾನ ಲಭಿಸಿದೆ. ಹೆಚ್ಚಿನ ಲೈಕ್ ಪಡೆಯದಿದ್ದರೂ ವಿಭಿನ್ನವಾಗಿ ಗಮನಸೆಳೆದ 3 ಫೋಟೋಗಳನ್ನು ತೀರ್ಪುಗಾರರು ಆಯ್ಕೆ ಮಾಡಿದ್ದಾರೆ. ಆದರೆ ಎಲ್ಲಾ ಅಮ್ಮ-ಮಕ್ಕಳ ಫೋಟೋಗಳಲ್ಲಿಯೂ ಒಂದೊಂದು ತರಹ ಪ್ರೀತಿ ಇತ್ತು. ಆದರೆ ಬಹುಮಾನಕ್ಕಾಗಿ ಕೆಲವೊಂದು ಪ್ರೀತಿಯನ್ನು ಹೆಕ್ಕಿ ನಿಮ್ಮ ಮುಂದಿಟ್ಟಿದ್ದೇವೆ. ತೀರ್ಪುಗಾರರು ಮೆಚ್ಚಿದ ಆಯ್ದ ಕೆಲವು ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ .
ಮಗು ಅಂದ್ರೆ ಹಾಲಿನಂತೆ, ಅಮ್ಮ ಎಂದರೆ ಸಕ್ಕರೆಯಂತೆ ಇಬ್ಬರೂ ಸೇರಿದರೆ ಹಾಲುಸಕ್ಕರೆ, ಬದುಕಿಗೆ ಅಕ್ಕರೆ. ಸ್ಪರ್ಧೆಯಲ್ಲಿ ಭಾರೀ ಹುಮ್ಮಸ್ಸಿನಿಂದ ಭಾಗವಹಿಸಿದ ಎಲ್ಲಾ ಅಮ್ಮ-ಕಂದಮ್ಮಗಳಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಉಡುಪಿXPRESS. ಆಗಾಗ ಹೊಸ ಹೊಸ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತದೆ. ನಮ್ಮ udupixpress.com ಫೇಸ್ಬುಕ್ ಪೇಜ್ ಲೈಕ್ ಮಾಡಿ ಹಾಗೂ ಸುದ್ದಿ ಜಾಲತಾಣ www.udupixpress.com ಗೆ ಭೇಟಿ ನೀಡಿ ಹೊಸ ಸುದ್ದಿ, ಮಾಹಿತಿಗಳನ್ನು ಪಡೆಯಿರಿ.