ಮಣಿಪಾಲ: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಸರಣಿ ಅಪಘಾತ ನಡೆಸಿದ ವಿದ್ಯಾರ್ಥಿ ಬಂಧನ

ಉಡುಪಿ: ಕುಡಿದ ಮತ್ತಿನಲ್ಲಿ ಅತೀ ವೇಗದಲ್ಲಿ ಕಾರು ಚಲಾಯಿಸಿ ಸರಣಿ ಅಪಘಾತ ನಡೆಸಿದ ಮಣಿಪಾಲದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಭಿಮನ್ಯು ನೇಗಿ ಬಂಧಿತ ವಿದ್ಯಾರ್ಥಿ. ಈತ ತಡರಾತ್ರಿ ಪ್ರೆಸ್ ಯುನಿಟ್ 4 ಬಳಿ ಸಾಲಾಗಿ ನಿಲ್ಲಿಸಿದ್ದ 7 ದ್ವಿಚಕ್ರ ವಾಹನಗಳಿಗೆ ಹಾನಿ ಉಂಟುಮಾಡಿದ್ದಾನೆ. ಈ ವೇಳೆ ಎದುರಿನಿಂದ ಆಗಮಿಸುತ್ತಿದ್ದ ಆಟೋ ಚಾಲಕ 76 ಬಡಗಬೆಟ್ಟು ನಿವಾಸಿ ಶಿವಪ್ರಸಾದ್ ಅವರಿಗೂ ಕಾರು ಡಿಕ್ಕಿ ಹೊಡೆದಿದ್ದು, ಅವರ ತಲೆಗೆ ಗಾಯವಾಗಿದೆ. ಹರಿಯಾಣ ನೋಂದಣಿ ಹೊಂದಿರುವ ರಿಟ್ಝ್ ಕಾರಿನಲ್ಲಿ ಈತ ಈ ಅಪಘಾತ ಎಸಗಿದ್ದಾನೆ.

ಯುನಿಟ್ 4 ಸಂಸ್ಥೆಯ ಉದ್ಯೋಗಿಗಳು ರಸ್ತೆಯ ಬದಿ ನಿಲ್ಲಿಸಿದ್ದ ದ್ವಿಚಕ್ರವಾಹನಗಳೂ ಹಾನಿಗೆ ಈಡಾಗಿವೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.