ಕೃಷಿ-ಗೋ ಸಂಸ್ಕೃತಿಯ ಸ್ವರ್ಗವಾದ ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆ.19 ರಿಂದ ಶ್ರೀಮನ್ನಾಗಮಂಡಲ

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನೆಲೆಗೊಂಡಿರುವ ಮುನಿಯಾಲು ಸಂಜೀವಿನಿ ಗೋಧಾಮವು ಕೃಷಿ, ಪ್ರಕೃತಿ ಮತ್ತು ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಸಮನ್ವಯಗೊಳಿಸಿದ ವಿಶಿಷ್ಟ ಕೇಂದ್ರವಾಗಿ ರೂಪುಗೊಂಡಿದೆ. ಪುರಾತನ ಶೈಲಿಗೆ ಆಧುನಿಕ ಸ್ಪರ್ಶ ನೀಡಿ ನಿರ್ಮಿಸಲಾದ ಈ ಗೋಧಾಮವು ಭಾರತೀಯ ಗೋತಳಿಗಳ ಸಂರಕ್ಷಣೆ, ಪಾರಂಪರಿಕ ಕೃಷಿ ವಿಧಾನಗಳ ಪುನರುಜ್ಜೀವನ ಮತ್ತು ಯುವ ಸಮುದಾಯವನ್ನು ಕೃಷಿಯತ್ತ ಆಕರ್ಷಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. “ಪ್ರಕೃತಿಯಿಂದ ಪ್ರಕೃತಿಗೆ” ಎಂಬ ವಿನೂತನ ಪರಿಕಲ್ಪನೆಯೊಂದಿಗೆ ಗೋಧಾಮವು ಕೃಷಿ ಆಸಕ್ತರನ್ನಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿಯೂ ಗಮನ ಸೆಳೆಯುತ್ತಿದೆ. ಫೆಬ್ರವರಿ 19ರಿಂದ 21ರವರೆಗೆ […]
ಉಡುಪಿ: ಮಹಿಳೆ ನಾಪತ್ತೆ

ಉಡುಪಿ, ಫೆ.16: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಬ್ರಹ್ಮಾವರ ತಾಲೂಕು ಹಿಲಿಯಾಣ ಗ್ರಾಮ ಚೋರಾಡಿ ನಿವಾಸಿ ರತಿ (37) ಎಂಬ ಮಹಿಳೆಯು ಜನವರಿ 31 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ದಪ್ಪ ಶರೀರ, ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಣಿಪಾಲ: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಸರಣಿ ಅಪಘಾತ ನಡೆಸಿದ ವಿದ್ಯಾರ್ಥಿ ಬಂಧನ

ಉಡುಪಿ: ಕುಡಿದ ಮತ್ತಿನಲ್ಲಿ ಅತೀ ವೇಗದಲ್ಲಿ ಕಾರು ಚಲಾಯಿಸಿ ಸರಣಿ ಅಪಘಾತ ನಡೆಸಿದ ಮಣಿಪಾಲದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಭಿಮನ್ಯು ನೇಗಿ ಬಂಧಿತ ವಿದ್ಯಾರ್ಥಿ. ಈತ ತಡರಾತ್ರಿ ಪ್ರೆಸ್ ಯುನಿಟ್ 4 ಬಳಿ ಸಾಲಾಗಿ ನಿಲ್ಲಿಸಿದ್ದ 7 ದ್ವಿಚಕ್ರ ವಾಹನಗಳಿಗೆ ಹಾನಿ ಉಂಟುಮಾಡಿದ್ದಾನೆ. ಈ ವೇಳೆ ಎದುರಿನಿಂದ ಆಗಮಿಸುತ್ತಿದ್ದ ಆಟೋ ಚಾಲಕ 76 ಬಡಗಬೆಟ್ಟು ನಿವಾಸಿ ಶಿವಪ್ರಸಾದ್ ಅವರಿಗೂ ಕಾರು ಡಿಕ್ಕಿ ಹೊಡೆದಿದ್ದು, ಅವರ ತಲೆಗೆ ಗಾಯವಾಗಿದೆ. ಹರಿಯಾಣ ನೋಂದಣಿ ಹೊಂದಿರುವ ರಿಟ್ಝ್ ಕಾರಿನಲ್ಲಿ ಈತ ಈ […]
ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕರಾಗಿ ಅಂಕಿತ್ ಶೆಟ್ಟಿ; ಸಹ ಸಂಚಾಲಕರಾಗಿ ಗಣೇಶ್ ಕಲ್ಯಾಣಪುರ ಆಯ್ಕೆ

ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಘಟಕ ಉಡುಪಿ ಪತ್ರಿಕಾ ಭವನ ಸಮಿತಿಯ 2025–28ನೇ ಸಾಲಿನ ನೂತನ ಸಂಚಾಲಕರಾಗಿ ಚಾನೆಲ್ 9 ವಾಹಿನಿಯ ಅಂಕಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿರುವ ವಾರ್ತಾಧಿಕಾರಿ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು. ಸಹ ಸಂಚಾಲಕರಾಗಿ ಉದಯವಾಣಿಯ ಗಣೇಶ್ ಕಲ್ಯಾಣಪುರ, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ನಮ್ಮ ಟಿವಿಯ ರಾಜೇಶ್ ಶೆಟ್ಟಿ, ಉದಯವಾಣಿಯ ರಾಜು ಖಾರ್ವಿ, ಪುನೀತ್ ಸಾಲ್ಯಾನ್, ಎಸ್.ಜಿ. ನಾಯ್ಕ್, […]
ಕಾರ್ಕಳ–ಮೂಡುಬಿದ್ರೆ: ‘ಪುಸ್ತಕ ಮನೆ’ಯಲ್ಲಿ ಸ್ಟೋರ್ ಅಸಿಸ್ಟಂಟ್ ಹುದ್ದೆಗೆ ನೇಮಕಾತಿ

ಕಾರ್ಕಳ :’ಪುಸ್ತಕ ಮನೆ’ ವತಿಯಿಂದ ಸ್ಟೋರ್ ಅಸಿಸ್ಟಂಟ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹತೆ ಮತ್ತು ಸೌಲಭ್ಯಗಳು: 🔹ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಹಾಗೂ ರೆಸಿಡೆನ್ಷಿಯಲ್ ಅಭ್ಯರ್ಥಿಗಳಿಗೆ ಆದ್ಯತೆ. 🔹ಉತ್ತಮ ವೇತನ,ಉಚಿತ ಊಟ ಮತ್ತು ವಸತಿ ಪದವಿ ಹಾಗೂ ಸಂಬಂಧಿತ ಅನುಭವ ಅಗತ್ಯ. 📩[email protected] ಗೆ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗೆ: 📞9606997391