ಉಡುಪಿ, ನ.7: ಕಾಪು ಪರಿಸರದಲ್ಲಿ ನ.6ರಂದು ಮಧ್ಯಾಹ್ನ ವೇಳೆ ಭಿಕ್ಷೆ ಬೇಡುವ ನೆಪದಲ್ಲಿ ಬಂದ ಮಹಿಳೆಯೊಬ್ಬರು ಮನೆಯೊಂದರ ಹೊರಗಡೆ ಇರಿಸಿದ್ದ 20ಕ್ಕೂ ಅಧಿಕ ತೆಂಗಿನ ಕಾಯಿಗಳಿದ್ದ ಗೋಣಿಯನ್ನೇ ಕಳವು ಮಾಡಿಕೊಂಡು ಹೋಗಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪರಿಸರದಲ್ಲಿ ಭಿಕ್ಷೆ ಬೇಡಿಕೊಂಡು ಬಂದ ಬುರ್ಖಾ ಧರಿಸಿದ್ದ ಮಹಿಳೆ ಬೀಗ ಹಾಕಿರುವ ಮನೆಯೊಂದನ್ನು ಗಮನಿಸಿದಳು. ಮನೆಯ ಹಿಂಬದಿಯಿಂದ ಬಂದ ಆಕೆ ತನ್ನ ಮುಖಕ್ಕೆ ಪರ್ದಾ ಕಟ್ಟಿಕೊಂಡು ತೆಂಗಿನ ಕಾಯಿ ಇರಿಸಿದ್ದ ಗೋಣಿಯನ್ನು ಹೊತ್ತೊಯ್ದಳು. ಅದನ್ನು ಅಲ್ಲೇ ಸಮೀಪದಲ್ಲಿ ಬೀಗ ಹಾಕಿದ ಇನ್ನೊಂದು ಮನೆಯ ಜಗಲಿಯಲ್ಲಿ ಇರಿಸಿ ಮತ್ತೆ ಬಂದು ತೆಂಗಿಯ ಸಿಪ್ಪೆ ತೆಗೆಯುವ ಸಾಧನವನ್ನು ತೆಗೆದುಕೊಂಡು ಹೋದಳು.
ಇನ್ನೊಂದು ಮನೆಯಲ್ಲಿ ಗೋಣಿಯಲ್ಲಿದ್ದ ಎಲ್ಲ ತೆಂಗಿನಕಾಯಿಯ ಸಿಪ್ಪೆ ಯನ್ನು ಸುಳಿದ ಆಕೆ, ಬಳಿಕ ಅದನ್ನು ಗೋಣಿಗೆ ಹಾಕಿಕೊಂಡು ಇತರ ಮನೆ ಗಳಿಗೆ ಭೀಕ್ಷೆ ಬೇಡಳು ತೆರಳಿದ್ದಳೆನ್ನಲಾಗಿದೆ. ಆಗ ಕೆಲವರು ಆಕೆಯ ಕೈಯಲ್ಲಿರುವ ಗೋಣಿಯ ಬಗ್ಗೆ ಪ್ರಶ್ನಿಸಿದ್ದಾರೆನ್ನಲಾಗಿದೆ. ಅದಕ್ಕೆ ಆಕೆ ಇದನ್ನು ಮನೊಂದರ ಒಡತಿ ನೀಡಿರುವುದಾಗಿ ಹೇಳಿದ್ದಳು. ಹೀಗೆ ಆ ಮಹಿಳೆ ಸುಮಾರು 20 ತೆಂಗಿನಕಾಯಿಯನ್ನು ರಾಜಾರೋಷವಾಗಿ ಕದ್ದೊಯ್ಯುವ ದೃಶ್ಯಾವಳಿ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.