ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ 5 ವರ್ಷದ ಬಾಲಕಿ ಮೃತ್ಯು.

ಹೈದರಾಬಾದ್: ಐದು ವರ್ಷದ ಬಾಲಕಿಯ ಕುತ್ತಿಗೆಗೆ ಚೈನೀಸ್ ಮಾಂಜಾ ಎಂಬ ಚೂಪಾದ ನೈಲಾನ್ ಗಾಳಿಪಟದ ದಾರ ಸಿಲುಕಿಕೊಂಡು ಮೃತಪಟ್ಟಿರುವ ಘಟನೆ ತೆಲಂಗಾಣದ ಮೆಡ್ಚಲ್ ಜಿಲ್ಲೆಯ ಕುಕತ್ಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಮೃತ ಮಗುವನ್ನು ನಿಶ್ವಿಕಾ ಆದಿತ್ಯ (5) ಎಂದು ಗುರುತಿಸಲಾಗಿದೆ.

ವಿವೇಕಾನಂದ ನಗರದ ಬಳಿ ಮಗು ತನ್ನ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬಾಲಕಿಯು ಇದ್ದಕ್ಕಿದ್ದಂತೆ ಕಿರುಚಿದಳು. ಇದರಿಂದಾಗಿ ಆಕೆಯ ತಂದೆ ವಾಹನವನ್ನು ನಿಲ್ಲಿಸಿದರು. ನೈಲಾನ್ ದಾರವು ಆಕೆಯ ಕುತ್ತಿಗೆಗೆ ಬಿಗಿಯಾಗಿ ಸುತ್ತಿಕೊಂಡಿದ್ದು, ತೀವ್ರ ರಕ್ತಸ್ರಾವವಾಗುತ್ತಿರುವುದನ್ನು ಅವರು ಗಮನಿಸಿದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.