ಉಡುಪಿ: ಕೋಡಿಬೆಂಗ್ರೆ ದೋಣಿ ದುರಂತ; ಮತ್ತೋರ್ವ ಯುವತಿ‌ ಮೃತ್ಯು- ಮೃತರ ಸಂಖ್ಯೆ ಮೂರಕ್ಕೆ ಏರಿಕೆ

ಉಡುಪಿ: ಕೋಡಿಬೇಂಗ್ರೆಯ ಡೆಲ್ಟಾ ಬೀಚ್ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಪ್ರವಾಸಿ ದೋಣಿ ದುರಂತದಲ್ಲಿ ಮತ್ತೋರ್ವ ಯುವತಿ‌ ಮೃತಪಟ್ಟಿದ್ದು, ಮೃತರ ಸಂಖ್ಯೆ ಮೂರಕ್ಕೆ ಏರಿದೆ.ಗಂಭೀರ ಸ್ಥಿತಿಯಲ್ಲಿದ್ದ ಮೈಸೂರಿನ ದಿಶಾ (26) ಎಂಬವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಶಂಕರಪ್ಪ (22) ಮತ್ತು ಸಿಂಧು (23) ಅವರು ಸೋಮವಾರ ಮೃತಪಟ್ಟಿದ್ದರು.ಘಟನೆ ವಿವರ:ರೆಸಾರ್ಟ್ ರೊಂದರಲ್ಲಿ ಉಳಿದಿದ್ದ 14 ಮಂದಿ ಪ್ರವಾಸಿಗರನ್ನು ವಿಹಾರಕ್ಕೆಂದು ದೋಣಿಯಲ್ಲಿ ಸಮುದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಇವರ ಪೈಕಿ ಕೆಲವರು ಲೈಫ್ ಜಾಕೆಟ್ ಧರಿಸಿರಲಿಲ್ಲ. ಸಮುದ್ರ ಮಧ್ಯೆ ದೋಣಿ ಅಕಸ್ಮಿಕವಾಗಿ […]

ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಇಂಪನಾ ಆರ್. ಪ್ರಥಮ ಸ್ಥಾನ

ಕುಂದಾಪುರ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಆಯೋಜಿಸಿದ್ದ 20ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೇಟಿಕ್ ಸ್ಪರ್ಧೆ – 2025 ಅಕ್ಟೋಬರ್ 26ರಂದು ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 2000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಕುಂದಾಪುರದ ಇಂಪನಾ ಆರ್. ಅವರು Z–X ಲೆವೆಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.ಇವರು ಐಡಿಯಲ್ ಪ್ಲೇ ಅಬಾಕಸ್ ಕುಂದಾಪುರ […]

ಬಾರ್ಡರ್‌-2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ; ಬಾಕ್ಸ್ ಆಫೀಸ್’ನಲ್ಲಿ ಗಳಿಕೆ ಎಷ್ಟು?

ಬಾಲಿವುಡ್‌ನ ಬಾರ್ಡರ್‌ 2 ಸಿನಿಮಾ ಬಿಡುಗಡೆಗೂ ಮುನ್ನ ಇದ್ದ ಎಲ್ಲಾ ನಿರೀಕ್ಷೆಗಳನ್ನು ಮೀರಿ ನಿಂತಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದವರಿಗೆ, ಸಿನಿಮಾ ತನ್ನ ಬೃಹತ್ ಬಾಕ್ಸ್ ಆಫೀಸ್ ಗಳಿಕೆಯ ಮೂಲಕವೇ ತಕ್ಕ ಉತ್ತರ ನೀಡಿದೆ. ಈ ಸಿನಿಮಾವು ಮೊದಲ ವಾರಾಂತ್ಯದಲ್ಲಿ ಅದ್ಭುತ ಕಲೆಕ್ಷನ್ ಮಾಡಿದ್ದು, ಗಣರಾಜ್ಯೋತ್ಸವದ ರಜೆಯು ಸಿನಿಮಾದ ವ್ಯವಹಾರಕ್ಕೆ ದೊಡ್ಡ ಮಟ್ಟದ ಬೂಸ್ಟ್ ನೀಡಿದೆ. ನಗರ ಪ್ರದೇಶಗಳಲ್ಲಿ ಶನಿವಾರದ ನಂತರ ಸಿನಿಮಾ ವೇಗ ಪಡೆದುಕೊಂಡರೆ, ಮಾಸ್ ಸೆಂಟರ್‌ಗಳಲ್ಲಿ ಶುಕ್ರವಾರದಿಂದಲೇ ಅಬ್ಬರ ಜೋರಾಗಿತ್ತು. ಹಿಂದಿ ಬೆಲ್ಟ್‌ನಾದ್ಯಂತ ಹಲವಾರು […]

ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ 5 ವರ್ಷದ ಬಾಲಕಿ ಮೃತ್ಯು.

ಹೈದರಾಬಾದ್: ಐದು ವರ್ಷದ ಬಾಲಕಿಯ ಕುತ್ತಿಗೆಗೆ ಚೈನೀಸ್ ಮಾಂಜಾ ಎಂಬ ಚೂಪಾದ ನೈಲಾನ್ ಗಾಳಿಪಟದ ದಾರ ಸಿಲುಕಿಕೊಂಡು ಮೃತಪಟ್ಟಿರುವ ಘಟನೆ ತೆಲಂಗಾಣದ ಮೆಡ್ಚಲ್ ಜಿಲ್ಲೆಯ ಕುಕತ್ಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮೃತ ಮಗುವನ್ನು ನಿಶ್ವಿಕಾ ಆದಿತ್ಯ (5) ಎಂದು ಗುರುತಿಸಲಾಗಿದೆ. ವಿವೇಕಾನಂದ ನಗರದ ಬಳಿ ಮಗು ತನ್ನ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬಾಲಕಿಯು ಇದ್ದಕ್ಕಿದ್ದಂತೆ ಕಿರುಚಿದಳು. ಇದರಿಂದಾಗಿ ಆಕೆಯ ತಂದೆ ವಾಹನವನ್ನು ನಿಲ್ಲಿಸಿದರು. ನೈಲಾನ್ ದಾರವು ಆಕೆಯ ಕುತ್ತಿಗೆಗೆ ಬಿಗಿಯಾಗಿ […]

ಭಾರತ-ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ಉತ್ಪಾದನೆಗೆ ಭಾರಿ ಉತ್ತೇಜನ; ಪ್ರಧಾನಿ ಮೋದಿ

ನವದೆಹಲಿ: ಮದರ್‌ ಆಫ್‌ ಆಲ್‌ ಡೀಲ್ಸ್‌ (ಎಲ್ಲಾ ಒಪ್ಪಂದಗಳ ತಾಯಿ) ಎಂದೇ ಕರೆಯಲ್ಪಡುವ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ. ‘ಸೋಮವಾರ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಒಂದು ದೊಡ್ಡ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಜನರು ಇದನ್ನು ‘ಮದರ್‌ ಆಫ್‌ ಆಲ್‌ ಡೀಲ್ಸ್‌’ (ಎಲ್ಲಾ ಒಪ್ಪಂದಗಳ ತಾಯಿ) ಎಂದು ಕರೆಯುತ್ತಿದ್ದಾರೆ. ಈ ಒಪ್ಪಂದದಿಂದಾಗಿ ಭಾರತ ಮತ್ತು ಯುರೋಪಿನ ಜನರಿಗೆ ಪ್ರಮುಖ ಅವಕಾಶಗಳು […]