ಉಡುಪಿ:ಕೃಷಿ ಇಲಾಖೆಯ ವತಿಯಿಂದ 2025-26 ನೇ ಸಾಲಿನ ಆತ್ಮ ಯೋಜನೆಯ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ
ರೈತರುಗಳಾದ ಸುಮಾ, ಗುಲಾಬಿ, ಸೀತಾರಾಮ ಪೂಜಾರಿ, ರಾಜೀವಿ ನಾಯ್ಕ, ರೇವತಿ ಭಟ್, ಜೋಧಾ ಶೆಟ್ಟಿ, ಸುಚಿತ್ರಾ, ಸೀತು, ಅಣ್ಣಿ ಪರವ
ಮತ್ತು ಸುಮತಿ ನಾಯಕ್ ಅವರುಗಳನ್ನು ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ಮಮತಾ ಪಿ.ಶೆಟ್ಟಿ, ವಸಂತಿ
ಕರ್ಕೇರ, ಶ್ರೀನಿವಾಸ ರಾವ್, ಶಕೀಲ ಶೆಟ್ಟಿ ಹಾಗೂ ಭಾವನಾ ಭಟ್ ಅವರುಗಳನ್ನು ಸನ್ಮಾನಿಸಲಾಯಿತು.
2023-24 ನೇ ಸಾಲಿನ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿಗೆ ಆಯ್ಕೆಯಾದ ರೈತ ಪುರುಷರ ವಿಭಾಗದಲ್ಲಿ ಮಣೂರಿನ ಲಕ್ಷ್ಮೀ, ಕೆದೂರಿನ ಕರುಣಾಕರ ಶೆಟ್ಟಿ ಮತ್ತು ಪಾದೂರಿನ ನಿತ್ಯಾನಂದ ನಾಯಕ್ ಹಾಗೂ ರೈತ ಮಹಿಳೆಯರ ವಿಭಾಗದಲ್ಲಿ ನೀಲಾವರದ ಲಲಿತಾ ಶೆಟ್ಟಿ, ಗುಲ್ವಾಡಿ ನಾಗರತ್ನ ಪೂಜಾರಿ ಹಾಗೂ ಮಠದಬೆಟ್ಟು ಲಕ್ಷ್ಮೀ ಅವರುಗಳನ್ನು ಸನ್ಮಾನಿಸಲಾಯಿತು.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಕರ್ಷಕವಾಗಿ ಪಥ ಸಂಚಲನ ನಡೆಸಿದ ಕಾಲೇಜು ವಿಭಾಗದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ
ಎನ್.ಸಿ.ಸಿ ಆರ್ಮಿ ವಿಭಾಗ ಪ್ರಥಮ, ಕುಂಜಿಬೆಟ್ಟು ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು ದ್ವಿತೀಯ ಹಾಗೂ ಪೂರ್ಣಪ್ರಜ್ಞ
ಕಾಲೇಜಿನ ಎನ್.ಸಿ.ಸಿ ನೇವಿ ವಿಭಾಗ ತೃತೀಯ ಸ್ಥಾನ ಪಡೆಯಿತು.
ಪ್ರೌಢ ಶಾಲಾ ವಿಭಾಗದಲ್ಲಿ ಒಳಕಾಡು ಸರ್ಕಾರಿ ಪ್ರೌಢಶಾಲೆ ಹಾಗೂ ಆನಂದತೀರ್ಥ ವಿದ್ಯಾಲಯ ಕುಂಜಾರುಗಿರಿ ಪ್ರಥಮ, ಕಡಿಯಾಳಿಯ
ಯು. ಕಮಲಾಭಾಯಿ ಪ್ರೌಢಶಾಲೆ ದ್ವಿತೀಯ ಹಾಗೂ ಮಾಧವಕೃಪ ಹೈಸ್ಕೂಲ್ ತೃತೀಯ ಸ್ಥಾನ ಪಡೆಯಿತು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಂತೆಕಟ್ಟೆ ಕಳತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಹಾಗೂ ಒಳಕಾಡು ಸರಕಾರಿ
ಮಾದರಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಪಡೆಯಿತು.
ದೇಶಭಕ್ತಿ ಕುರಿತಾದ ನೃತ್ಯ ಕಾರ್ಯಕ್ರಮದಲ್ಲಿ ಒಳಕಾಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ, ಉಡುಪಿ ಪಣಿಯಾಡಿ
ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ, ಉಡುಪಿಯ ಶ್ರೀ ಮುಕುಂದ ಕೃಪಾ ಆಂಗ್ಲಮಾಧ್ಯಮ ಶಾಲೆ ತೃತೀಯ ಸ್ಥಾನ
ಹಾಗೂ ಉದ್ಯಾವರ ಸೈಂಟ್ ಕ್ಲೇವಿಯರ್ ಆಂಗ್ಲಮಾಧ್ಯಮ ಶಾಲೆ ಸಮಾಧಾನಕರ ಬಹುಮಾನ ಪಡೆಯಿತು.
2024-25 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಅತ್ಯಧಿಕ ಅಂಕ ಗಳಿಸಿದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾದ ಎಸ್. ಶ್ರೀ ರಾಮ್ ಶೆಟ್ಟಿ
(625 ಅಂಕ), ತೃಪ್ತಿ (623 ಅಂಕ), ನೂರ್ ಮಾಝಿನ್ (622 ಅಂಕ) ಹಾಗೂ ಸೃಷ್ಠಿ ಆಚಾರ್ (622 ಅಂಕ) ಅವರುಗಳನ್ನು ಹಾಗೂ 2024-
25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉಡುಪಿ ತಾಲೂಕಿನಲ್ಲಿ ಅತ್ಯಧಿಕ ಅಂಕಗಳಿಸಿದ ಸರಕಾರಿ ಶಾಲೆಯ ವಿದ್ಯಾರ್ಥಿಗಳಾದ ಜಯದೀಪ್ ಪೂಜಾರಿ (621 ಅಂಕ), ಪ್ರಿಯಾ (620 ಅಂಕ) ಹಾಗೂ ಅನನ್ಯ (619 ಅಂಕ) ಅವರುಗಳನ್ನು ಸನ್ಮಾನಿಸಲಾಯಿತು.
















