ದೇಶದಲ್ಲಿ ಎಟಿಎಂಗಳ ಸಂಖ್ಯೆ 2017ರ ಡಿಸೆಂಬರ್ನಿಂದ 2018ರ ಸೆಪ್ಟೆಂಬರ್ ಅವಧಿಯಲ್ಲಿ 2.07 ಲಕ್ಷದಿಂದ 2.05ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಆರ್ಬಿಐ ಮಾಹಿತಿ ನೀಡಿದೆ. ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕ್ಗಳು ಶಾಖೆಗಳನ್ನು ಮೇಲ್ದರ್ಜೆಗೇರಿಸುತ್ತಿವೆ. ಇದರ ಜತೆಗೆ ಪಾಯಿಂಟ್ ಆಫ್ ಸೇಲ್, ಯುಪಿಐನಂತಹ ಡಿಜಿಟಲ್ ಪಾವತಿ ವ್ಯವಸ್ಥೆಗಳ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಎಟಿಎಂಗಳ ಸಂಖ್ಯೆ ತಗ್ಗಿಸಲಾಗುತ್ತಿದೆ ಎಂದು 2017–18ರ ಬ್ಯಾಂಕಿಂಗ್ ಪ್ರಗತಿ ವಲಯವು ವರದಿಯನ್ನು ನೀಡಿದೆ.
ಆದರೆ ನಿರ್ವಹಣಾ ವೆಚ್ಚದಲ್ಲಿ ಭಾರಿ ಏರಿಕೆ, ಹೊಸ ನೋಟು ಮಷಿನ್ಗಳಿಗೆ ತಗಲುವ ಹೆಚ್ಚುವರಿ ಹೊರೆಯನ್ನು ಬ್ಯಾಂಕ್ಗಳು ಭರಿಸದೇ ಇರುವುದರಿಂದ ಎಟಿಎಂಗಳನ್ನು ಮುಚ್ಚಲಾಗುತ್ತಿದೆ ಎಂದು ಎಟಿಎಂ ಉದ್ಯಮ ಒಕ್ಕೂಟವು ತಿಳಿಸಿದೆ.